‘ಇಂಥದೇ ರಾತ್ರಿ’/ಮಧು ಬಿರಾದಾರ/ಬಾ ಕವಿತಾ

ಮಧು ಬಿರಾದಾರ

ಇಂಥದೇ ರಾತ್ರಿ
ವಿಚಿತ್ರ ವೈರುದ್ಯದ ನಡುವೆ
ತೀವ್ರ ಪ್ರೀತಿ
ಇಂಥದೇ ರಾತ್ರಿ
ಅವಳು ಗಾಡವಾದ ನಿದ್ದೆಯಲ್ಲಿ
ರಾತ್ರಿಯಂತೆ ಮಲಗಿದ್ದಾಳೆ
ನಾನು ಹುಚ್ಚನಂತೆ ಪ್ರೀತಿಸುತ್ತಿದ್ದೆ
ನಿಶೆಯೆರಿದ ಸಮುದ್ರದಂತೆ

ಆಕಾಶದ ಚುಕ್ಕಿಯಂತೆ ಕಣ್ಣೀರಿಟ್ಟು
ಹಲಬಿದೆ ; ಲೋಕಾಂತದ ದನಿ
ಎದೆಗೆಪ್ಪಳಿಸಿದಾಗ
ಕುಗ್ಗಿದೆ ಚಳಿ ಒಳಹೊಕ್ಕು

ಅವಳು ಕಂಡಂತೆ
ಗೊರಕೆ ಹೊಡೆದಂತೆ
ಇಡೀ  ರಾತ್ರಿ ಮತ್ತೆ ಮತ್ತೆ
ಗಮನಿಸಿ ಸೋತೆ
ನೋಡಿದೆ ನನ್ನೋಳಗೆ
ಹಾಗೆಯೇ ನನ್ನಾಳಕ್ಕೆ ಇಳಕೊಂಡೆ

ಎರಡು ದಡದ ಆಳವಿಸ್ತಾರ
ಒರೆಕೊರೆ ಸೆಳವು
ವಿಭಿನ್ನ ನದಿಯ ಸೆರಗು
ದಕ್ಷಿಣಾಭಿಮುಖ ಉತ್ತರಾಭಿಮುಖ
ಎಷ್ಟೊಂದು ವೈವಿಧ್ಯ
ಈ ರಾತ್ರಿ ಹಗಲುಗಳ ಮಧ್ಯ
ಮರದ ಮರ್ಮರವೂ ಆಪ್ತವಾದಂತೆ
ಕತ್ತಲೆ ರಾತ್ರಿ

ಇಂಥದೇ ರಾತ್ರಿ
ಚಂದಿರ ಚುಕ್ಕಿ ಒಂದ್ದಾಗಿದ್ದು
ಉದಯಿಸುವ ಪೂರ್ವ ಏನೇಲ್ಲ
ಘಟಿಸಿತು ; ಘಟಸರ್ಪಗಳ ನಡುವೆ
ಏಕಾಂತದ ತಂಗಾಳಿಗೆ
ಪರಿಮಳ ಜೊತೆಯಾದಂತೆ
ಸಂಭ್ರಮ ಹೆಗಲೇರಿ ವಿಜ್ರಮಿಸಿತು
ಇಂಥದೇ ರಾತ್ರಿ

ಈ ರಾತ್ರಿ ಯಾತನೆ
ಪೂರ್ವ ಯಾತನೆಯಲ್ಲದ ಅವಕಾಳಿ
ಬೆಂಕಿಯಂತ ಬೆಳಕು
ಕಣ್ಣಿಗೆ ಕೊಳ್ಳಿಯಿಟ್ಟು
ಬೊಬ್ಬೆ ಹೊಡೆದಂತೆ

ಸತ್ತ ಹಗಲಿನ ಮೇಲೆ
ಗೋರಿ ತೋಡಿದರೇನು
ಅರಮನೆ ಕಟ್ಟಿದರೇನು
ಕತ್ತಲೆ ಬೇಕು
ಪ್ರೇಮದ ನರಳಾಟಕ್ಕೆ
ಬೆಯಲು – ಪುಟಿದೆಳಲು
ಅನಂತ ತಾರೆ
ಪೂರ್ವಕಾಲದ ಬಂಧುವಿನಂತೆ
ಜೊತೆಯಾಗಿರಬೇಕು

ಇಂಥದೇ ರಾತ್ರಿ

1 comment

  1. ಪ್ರಿಯ ಮಧು, ಅಭಿನಂದನೆಗಳು. ಕವಿತೆಯ ಲಹರಿ‌ ಚೆನ್ನಾಗಿದೆ. ಆದರೆ ಸಾಕಷ್ಟು ಕಾಗುಣಿತ ದೋಷಗಳು ಇವೆ. ಅವನ್ನು ನಿವಾರಿಸಿದರೆ ಕವಿತೆ ಇನ್ನೂ ಸುಂದರವಾಗುತ್ತದೆ. ಧನ್ಯವಾದಗಳು.

Leave a Reply