ರೆಬೆಲ್ ಆಗೇ ಎಂಟ್ರಿ ಕೊಡ್ತಾರೆ..

ಧನಂಜಯ್ ಎನ್ 

ನಮ್ಮನೆ ಮುಂದೆ 4, 5 ,6 ನೆ ಕ್ಲಾಸ್ ಓದ್ತಾ ಇರೋ ಹುಡುಗರು , ನಾನೇ ಕಲಿಸಿದ ಲಗೋರಿ ಆಟ ಆಡ್ತಾ ಮಾತಾಡ್ಕೋತಾ ಇದ್ರು,

* ಹೇ ಏನೋ ಅಂಬ್ರೀಷು, ಸಿಎಂಗೇ ಬೈದುಬಿಟ್ಟನಂತೆ…!!!
* ಹೂ ಸೀಎಂ ಅಂದ್ರೆ, ಅದೇ ಪೀಮ್ ಗಿಂತಾ ದೊಡ್ಡೋರಾ ಚಿಕ್ಕೋರಾ…ಎನೋ… 🙄
* ಲೇ ಅದೇ ಕಣೋ ರಜನಿಕಾಂತ್ ಗೂ ಬಡ್ಡಿ ಮಗನೇ ಅಂತ ಬೈದಿದ್ರಂತೆ,,, ಕನ್ಲಾ…
* ಸಖತ್ ದುಡ್ಡು ಹಂಚುತ್ತಾ ಇದ್ನಂತೆ ಕಣೋ.. ಲಕ್ಷಾಧೀಶ್ವರ ಅಂತೆ ಕಣೋ…
* ಹೂ ನಾನ್ ನೋಡಿದೀನಿ, ಚಕ್ರವ್ಯೂಹ ಅಂತ ಪಿಚ್ಚರ್ರು ಮೊನ್ನೆ ಹಾಕಿದ್ರು, ಅದ್ರಲ್ಲಿ ಸಿಎಂ ಆಗಿದ್ರು ಅವ್ರು… ಆಗ ದಿಶುಮ್ ಡಿಶುಮ್ ಅಂತ ಶೂಟ್ ಮಾಡಿದ್ರು ಎಲ್ಲರ್ನು.. ಆಗ್ಲೇ ಅಂತೆ ಅವರನ್ನ ಸಿದ್ದರಾಮಯ್ಯ ವಾಪಸ್ ಕಳಿಸಿದ್ದು..
* ಸುವರ್ಣ ಚಾನೆಲ್ ನೋಡುದ್ಯಾ.. ಅದ್ರಲ್ಲಿ ಅವ್ರು ತಿನ್ನೋದೆಲ್ಲಾ ತೋರಿಸ್ತಾ ಇದ್ರು,,, ಮಾಂಸ ತಿಂದ್ರೆ ಹಂಗ್ ಇರ್ಬೋದೇನೋಪಾ… ನೀನ್ ತಿಂತ್ಯ ಅಲ್ವಾ.. ಅಂದ್ರೆ ನೀನೂ ಮುಂದೆ ಸಿಎಂ ಆಗ್ಬೋದು ಅಲ್ವಾ…

ಇನ್ನೂ ಏನೇನೋ ಮಾತಾಡ್ತಾ ಇದ್ರು, ನಾನೂ ಬೈಕ್ ಮೇಲಿನ ಧೂಳು ಒರೆಸುತ್ತಾ ಕೇಳಿಸಿಕೊಂಡೆ.

ವಿಷ್ಯಾ ಅಂದ್ರೆ, ಮುಂದಿನ ಜನರೇಷನ್ ಹುಡುಗರಿಗೆ ಅಂಬರೀಷ್ ದೊಡ್ಡ ಸ್ಟಾರ್ ಆಗಿಯೇ ಎಂಟ್ರಿ ಆಗ್ತಾರೆ…

ಈ ಹುಡುಗರು ತಮ್ ತಮ್ಮ ಅಪ್ಪಂದಿರ ಕಾಲದ ರಾಜಕೀಯ ಮತ್ತು ಸಿನೆಮಾ ಫೈಲ್ ಗಳನ್ನ ಧೂಳೆತ್ತಿ ಒರೆಸಿ ನೋಡಬೇಕಾದ್ರೆ ಅವರ ಕಣ್ಣಿಗೆ ಈ ರೆಬಲ್ ಕ್ಯಾರೆಕ್ಟರ್ ಅದಿನ್ನೆಂಥಾ ಲೆವೆಲ್ ಗೆ ಎಕ್ಸ್ಪೋಸ್ ಆಗ್ಬೋದು ಅಂತ ಯೋಚ್ನೆ ಮಾಡ್ತಾ ಇದೀನಿ .

Leave a Reply