ಪುಸ್ತಕ ಪ್ರಾಧಿಕಾರ ಹಸ್ತಪ್ರತಿ ಬಹುಮಾನ: ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಕನ್ನಡ ಪುಸ್ತಕ ಪ್ರಾಧಿಕಾರವು 1993ರಲ್ಲಿ ಪ್ರಾರಂಭವಾಗಿದ್ದು, ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಪ್ರಕಾಶಕರನ್ನು / ಸಾಹಿತಿಗಳನ್ನು / ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷವು ಪ್ರಶಸ್ತಿಗಳನ್ನು / ಬಹುಮಾನಗಳನ್ನು ಹಾಗೂ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಗುತ್ತಿದೆ.

2017ನೇ ಸಾಲಿನಿಂದ ಪ್ರಥಮ ಬಾರಿಗೆ ದಲಿತ ಸಾಹಿತಿಗಳ ಕೃತಿ ಪ್ರಕಟಣೆಗೆ ಧನಸಹಾಯ ನೀಡುವ ಯೋಜನೆಯನ್ನು ಹಾಗೂ ಪುಸ್ತಕ ಮುದ್ರಣ ಸೊಗಸು ಬಹುಮಾನವನ್ನು ಕೂಡ ನೀಡುವ ಯೋಜನೆಯನ್ನು ಹಮ್ಮಿಕೊಂಡು ಈ ಯೋಜನೆಗೆ ಆಯ್ಕೆಯಾದ ಪ್ರಕಾಶಕರು / ಸಾಹಿತಿಗಳು / ಯುವ ಬರಹಗಾರರ ವಿವರ ಕೆಳಕಂಡಂತಿದೆ.

2017ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು

ಪ್ರಶಸ್ತಿ ವಿವರ ಪ್ರಕಾಶನ ಸಂಸ್ಥೆ / ಸಾಹಿತಿಗಳ ಹೆಸರು ಪ್ರಶಸ್ತಿ ಮೊತ್ತ
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ | ವಿದ್ಯಾನಿಧಿ ಪ್ರಕಾಶನ, ಗದಗ | ರೂ.1,00,000-00
ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ | ಪ್ರೊ. ಷ.ಶೆಟ್ಟರ್‌, ಬೆಂಗಳೂರು | ರೂ.75,000-00
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ | ಶ್ರೀ ನ. ರವಿಕುಮಾರ್‌, ಬೆಂಗಳೂರು | ರೂ.50,000-00
ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ | ಡಾ|| ಹೆಚ್. ಗಿರಿಜಮ್ಮ, ದಾವಣಗೆರೆ | ರೂ.25,000-00

2017ನೇ ಸಾಲಿನ ಪುಸ್ತಕ ಸೊಗಸು ಬಹುಮಾನಕ್ಕೆ 351 ಶೀರ್ಷಿಕೆಗಳು ಬಂದಿದ್ದು, ಆಯ್ಕೆಯಾದ ಶೀರ್ಷಿಕೆಗಳು ಈ ಕೆಳಕಂಡಂತಿವೆ.

ಮೂರು – ಪುಸ್ತಕ ಸೊಗಸು ಬಹುಮಾನಗಳನ್ನು ಪುಸ್ತಕದ ಪ್ರಕಾಶನ ಸಂಸ್ಥೆಗಳಿಗೆ
ಒಂದು – ಮಕ್ಕಳ ಪುಸ್ತಕ ಸೊಗಸು ಬಹುಮಾನವನ್ನು ಪುಸ್ತಕದ ಪ್ರಕಾಶನ ಸಂಸ್ಥೆಗೆ
ಎರಡು – ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಹಾಗೂ ಚಿತ್ರ ಕಲೆಯ ಬಹುಮಾನವನ್ನು ಕಲಾವಿದರಿಗೆ
ಒಂದು – ಪುಸ್ತಕ ಮುದ್ರಣ ಸೊಗಸು ಬಹುಮಾನವನ್ನು ಮುದ್ರಣಾಲಯಕ್ಕೆ ನೀಡಲಾಗುವುದು.

ಬಹುಮಾನ ಕೃತಿ / ಲೇಖಕರು ಪ್ರಕಾಶನ ಸಂಸ್ಥೆ ಮತ್ತು ಮುಖಪುಟ ವಿನ್ಯಾಸ ಮತ್ತು ಚಿತ್ರ ಕಲಾವಿದರು ಹಾಗೂ ಮುದ್ರಣಾಲಯ

ಮೊದಲನೇ ಬಹುಮಾನ
25,000-00

ಕರುನಾಡ ಕೋಟೆಗಳ ಸುವರ್ಣ ನೋಟ
ಸಂ: ಶ್ರೀ ವಿಶ್ವನಾಥ ಸುವರ್ಣ ಸುವರ್ಣ ಪಬ್ಲಿಕೇಷನ್, ಬೆಂಗಳೂರು

ಎರಡನೇ ಬಹುಮಾನ
20,000-00

ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್
ಲೇ: ಡಾ. ಎನ್‌. ಗುರುಮೂರ್ತಿ ಶ್ರೀ ಭವತಾರಿಣಿ ಪ್ರಕಾಶನ, ಬೆಂಗಳೂರು

ಮೂರನೇ ಬಹುಮಾನ
10,000-00 ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ
ಲೇ: ಪ್ರೊ. ಎಚ್‌.ಟಿ. ಪೋತೆ ಸಿ.ವಿ.ಜಿ. ಬುಕ್ಸ್, ಬೆಂಗಳೂರು

ಮಕ್ಕಳ ಪುಸ್ತಕ ಸೊಗಸು ಬಹುಮಾನ
8,000-00

ಪುಟ್ಟಿಯ ಗಿರಗಟ್ಟೆ
ಲೇ: ಶ್ರೀ ಬಾಗೂರು ಮಾರ್ಕಂಡೇಯ ಎಸ್‌.ಎಲ್‌.ಎನ್‌. ಪಬ್ಲಿಕೇಷನ್‌, ಬೆಂಗಳೂರು

ಮುಖಪುಟ ಚಿತ್ರ ವಿನ್ಯಾಸ ಬಹುಮಾನ
10,000-00

ಕರಿ ಕಣಗಿಲ
ಇ. ಮೂ. ಲೇ: : ಶ್ರೀ ಕೆ. ಪುರುಷೋತ್ತಮ
ಅನುವಾದ : ಡಾ. ಎಚ್‌.ಎಸ್‌. ಅನುಪಮಾ

ಬಹುಮಾನಿತ ಕಲಾವಿದರು:
ಶ್ರೀ ಅರುಣ ಕುಮಾರ ಜಿ.
ಶ್ರೀ ಕೃಷ್ಣ ಗಿಳಿಯಾರ್

ಮುಖಪುಟ ಚಿತ್ರ ಕಲೆಯ ಬಹುಮಾನ
8,000-00

ಹಲಗೆ ಮತ್ತು ಮೆದುಬೆರಳು
ಲೇ: ಕಾದಂಬಿನಿ

ಬಹುಮಾನಿತ ಕಲಾವಿದರು :
ಶ್ರೀ ಗಿರಿಧರ ಕಾರ್ಕಳ

ಪುಸ್ತಕ ಮುದ್ರಣ ಸೊಗಸು ಬಹುಮಾನ
5000-00

ವಚನ ಮಾರ್ಗ
ಪ್ರ. ಸಂ. : ಡಾ. ಶಿವಮೂರ್ತಿ ಮುರುಘಾ ಶರಣರು ಮುದ್ರಣಾಲಯ :
ಸ್ವ್ಯಾನ್‌ ಪ್ರಿಂಟರ್ಸ್, ಬೆಂಗಳೂರು

2017ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ 136 ಹಸ್ತಪ್ರತಿಗಳು ಬಂದಿದ್ದು, ಆಯ್ಕೆಯಾದ ಕೃತಿಗಳು ಈ ಕೆಳಕಂಡಂತಿದೆ.

ಕೃತಿ ಹೆಸರು ಲೇಖಕರ ಹೆಸರು

ಮೊದಲ ಮೊಗ್ಗು । ರಜನಿ ರೆಡ್ಡಿ । ರಾಯಚೂರು
ಮೌನ ಮಾತಾಡಿದಾಗ । ಮಮತಾ ಡಿ.ಎಲ್‌. ।ಚಾಮರಾಜನಗರ
ಒಲವಿನೊರತೆ । ವಿದ್ಯಾಧರ ಎ.ಪಿ.ಎಮ್. । ದಾವಣಗೆರೆ
ಡಾ. ಬಂಜಗೆರೆ ಜಯಪ್ರಕಾಶ್‌ರವರ ಕಾವ್ಯ ವಿಮರ್ಶೆ । ನಾಗೇಂದ್ರಪ್ಪ ಶಿವಶರಣಪ್ಪ ಮೈಲಾರಿ । ಕಲಬುರಗಿ
ಕಾವ್ಯಶ್ರೀ ಮಹಾಗಾಂವಕರ ಜೀವನ – ಸಾಹಿತ್ಯ । ಸಂತೋಷಕುಮಾರ ಎಸ್. ಹಿರೇಮನಿ, ।ಕಲಬುರಗಿ
ಸಂಚಿಯೊಳಗಿನ ಸಂಜೆಗಳು ಸದ್ದಿಲ್ಲದ ಪಿಸುಮಾತು ।ಅಕ್ಷತಾರಾಜ್‌ ಪೆರ್ಲ, ।ಕಾಸರಗೋಡು
ವಸುಧೆಯೊಳಗಿನ ಆರ್ಭಟ । ಉಮೇಶ್‌ ಬಾಬು ಮಠದ್‌, । ಬಳ್ಳಾರಿ
ಹೆತ್ತವಳು । ವೀರೇಶ ದೇವರಮನಿ, ।ರಾಯಚೂರು
ಅಮ್ಮ ನಿನ್ನ ತೋಳಿನಲ್ಲಿ ।ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ।ಕೊಪ್ಪಳ
ಚಿಗುರೆಲೆ । ಪರಮಾನಂದ ಎಸ್. ಸರಸಂಬಿ, । ಕಲಬುರಗಿ
ಬೆತ್ತಲಾದ ಚುಕ್ಕೆಗಳು । ಶ್ರೀಕಾಂತ ಗ. ಬಣಕಾರ, । ಹಾವೇರಿ
ಬಡ್ತಿ । ಚಂದ್ರು ಆರ್.‍ ಪಾಟೀಲ್‌, । ಯಾದಗಿರಿ
ನೀ ಕಂಡಂತೆ ನಾನು….!! । ಸಿದ್ದಪ್ಪ ಎನ್‌. ಎಚ್., । ಕಲಬುರಗಿ
ಚಾಮರಾಜನಗರ ತಾಲೂಕಿನ ವಿಜಯನಗರ ಕಾಲದ ದೇವಾಲಯಗಳು । ಶ್ವೇತ ಸಿ., । ಚಾಮರಾಜನಗರ
ಮೊದಲ ಹೆಜ್ಜೆ । ವೀರಶೆಟ್ಟಿ ಸಂಗ್ರಾಮ್‌, ಬೀದರ್

ಕತ್ತಲ ಜಗದ ಅಲೆಮಾರಿ । ಜನನಿ ವತ್ಸಲ, ।ಬೆಂಗಳೂರು
ಸಂಪ್ರೀತಿ । ಬಿ.ಎಂ. ಅಮರವಾಡಿ, ।ಬೀದರ್

ವಚನ ವೈವಿಧ್ಯ ।ವಿವೇಕಾನಂದ ಸಜ್ಜನ, । ಕಲಬುರಗಿ
ಅಪ್ಪನ ಗಿಲಾಸು । ನಾಗರಾಜ ಪೂಜಾರ, । ಬಳ್ಳಾರಿ
ದಾಹಗಳ ಮೈ ಸವರುತ್ತಾ… । ರಮ್ಯ ಕೆ.ಜಿ. ಮೂರ್ನಾಡು, । ಕೊಡಗು
ಸಾರ್ಥಕ ಬದುಕು । ಸರ್ವೇಶ್‌ ಎನ್.ಎಂ., । ಕೋಲಾರ
ಮೌನ ಮಾತಾದಾಗ । ಶಿವಕುಮಾರ ಮೋಹನ ಕರನಂದಿ, । ಬಾಗಲಕೋಟೆ
ನೀವು ಪ್ರೀತಿಸುವುದಾದರೆ… । ಎಂ. ಅಪೂರ್ವ, । ಬೆಂಗಳೂರು
ತುಂತುರು ಹನಿ । ವಾಸಯ್ಯ ಎನ್‌., । ಮೈಸೂರು
ಬೆಳಕಿನ ಒಂಟಿ ನಡಿಗೆ । ಬೀರು ದೇವರಮನಿ, । ರಾಯಚೂರು
ಸತ್ಯಾನ್ವೇಷಣೆ । ಮಂಜುನಾಥ ಹೊನ್ನಾಳಿ, । ಹಾವೇರಿ
ನಿಲುಗನ್ನಡಿ । ಚೆನ್ನರಾಜು ಎಂ. । ಬಸಪ್ಪನದೊಡ್ಡಿ
ಮಹಿಳಾ ಹಕ್ಕುಗಳ ನೆಲೆಯಲ್ಲಿ ಗಾಂಧೀಜಿ ।ಡಾ. ಸುನಿತ ಎನ್., । ಚಾಮರಾಜನಗರ
ಅಂತರ್ಮುಖಿ । ಡಾ. ಹಂಸವೇಣಿ ಈ., । ಮಂಡ್ಯ
ಜಾಡು ತಪ್ಪಿದ ನಡಿಗೆ । ಸೋಮು ಕುದರಿಹಾಳ, । ಕೊಪ್ಪಳ
ಕಂಡು ಕಾಣದ ಬುದ್ಧ । ಜ್ಯೋತಿ ಪಿ. ಹೆರಗು, । ಬೆಂಗಳೂರು
ಮಾಸದ ಕಿರುನಗೆ । ಅಶ್ವಿನಿ ಡಿ.ಎನ್‌., । ತುಮಕೂರು
ಮೊದಲ ಹನಿ । ವೆಂಕಟೇಶ ಚಾಗಿ, । ರಾಯಚೂರು
ಶಿಲೆಯಾದ ಅವಳು । ಡಾ. ಎ. ವಿಜಯಲಕ್ಷ್ಮಿ, । ಕೋಲಾರ
ತೋಚಿದ್ದೇ ಗೀಚಿದೆ….!! । ಆರ್‍.ಪಿ. ಮಂಜುನಾಥ್‌ ಬಿ.ಜಿ.ದಿನ್ನೆ, । ಬಳ್ಳಾರಿ
ಮೌನ ಮುರಿದಾಗ । ಡಾ. ಸಂತೋಷ ಕುಮಾರ ಎಸ್. ಕಂಬಾರ, । ಕಲಬುರಗಿ
ಭಾಷಿಕ ಸಂಕಥನ : ಗುಂಡು, ಹೆಣ್ಣು । ಡಾ. ಚಂದ್ರಕಲಾ ಜಿ., । ಹೊಸಪೇಟೆ
ಉರಿವ ಚಂದಿರ । ಸ್ನೇಹಲತಾ ಗೌನಳ್ಳಿ, । ಕಲಬುರಗಿ
ಅರಳುಮಲ್ಲಿಗೆ । ಲಕ್ಷ್ಮೀ ದೊಡಮನಿ, । ಸೊಲ್ಲಾಪುರ
ಯುದ್ಧಭೂಮಿಗೆ ನಿತ್ಯಹಬ್ಬ । ಶೇಕ್ಷಾವಲಿ ಅಯ್ಯನಹಳ್ಳಿ, । ಬಳ್ಳಾರಿ
ಮತ್ತದೇ ಮೌನ । ದುಂಡಯ್ಯ ಎಲ್ಲೇಮಾಳ, । ಚಾಮರಾಜನಗರ
ಸಮ ಸಮಾಜದೆಡೆಗೆ ।ರಾಜಕುಮಾರ ಎಸ್. ಮಾಳಗೆ, । ಕಲಬುರಗಿ
ಸಾಹಿತ್ಯ ವೈವಿಧ್ಯ । ಡಾ. ವಸಂತ ವಿ. ನಾಶಿ, । ಕಲಬುರಗಿ
ಬೆಳಕಿನೆಡೆಗೆ । ಜಲೀಲ ಅಲ್ಲಾವುದ್ದೀನ ಪಟೇಲ್‌, । ಕಲಬುರಗಿ
ಹಡೆದವ್ವ । ಮಾರುತಿ, । ಬೀದರ್

ಬೇವರ್ಸಿಯ ಬಯೋಡೇಟಾ । ಡಾ. ಮಹೇಂದ್ರ ಎಸ್. । ಬೆಂಗಳೂರು
ಗುಲಾಬಿ ಕಚ್ಚಿನ ಬಳೆಗಳು । ಸಂಧ್ಯಾ ಹೆಗಡೆ, । ಬೆಂಗಳೂರು
ಪದ ಪುರಾಣ । ರವೀಂದ್ರ ಬೆಟಗೇರಿ, । ಕಲಬುರಗಿ
ಕರ್ನಾಟಕ ಬಂದೂಕು ವೀರಗಲ್ಲುಗಳು । ಗೀತಾ ಪೋಲೀಸ ಪಾಟೀಲ, । ಬಳ್ಳಾರಿ
ದೀವಟಿಗೆ । ಬಸವಣ್ಣ ಎಂ. ಎಸ್. । ಚಾಮರಾಜನಗರ
ನೀನೊಂದು ಆತ್ಮಕಥೆ ಬರೆಯಬೇಕಿತ್ತು । ಅನಿಲ್ ಕುಮಾರ್‍ ಹೊಸೂರು, । ಚಾಮರಾಜನಗರ
ಚೈನಾಮೇಡ್ ಗುಗ್ಗುಳ । ಶ್ರೀಹರ್ಷ ಸಾಲಿಮಠ, । ಆಸ್ಟೇಲಿಯಾ
ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ । ಸುನಿತಾ ಪುಂಡಲೀಕ । ಬೀದರ

ದಲಿತ ಸಾಹಿತಿಗಳ ಕೃತಿ ಪ್ರಕಟಣೆ ಧನಸಹಾಯಕ್ಕೆ104 ಹಸ್ತಪ್ರತಿಗಳು ಬಂದಿದ್ದು, ಆಯ್ಕೆಯಾದ ಕೃತಿಗಳು ಈ ಕೆಳಕಂಡಂತಿದೆ.

1. ತಳಸಮುದಾಯದ ಸಾಂಸ್ಕೃತಿಕ ಪದಕೋಶ ಎಸ್‌. ಚಂದ್ರಕಿರಣ್ ಕುಳವಾಡಿ, ಮೈಸೂರು

2. ಬಾಬಾಸಾಹೇಬರ ಬೆಳಕಿನಲ್ಲಿ…. ರಘೋತ್ತಮ ಹೊ.ಬ., ಮೈಸೂರು
3. ಸಾಮಾಜಿಕ ಒಳನೋಟ ಗುಂಡಪ್ಪ ದೇ. ಕಾಮತ, ಬಾಗಲಕೋಟ
4. ಗವಿಗಂಧ ಡಾ. ಶರಣಪ್ಪ ಕವಡೆ, ಕಲಬುರಗಿ
5. ನೀಲಿ ಮಿಂಚು ಪರಶುರಾಮ ಶಿವಶರಣ, ವಿಜಯಪುರ
6. ಚಾಕಣದ ಸುಭದ್ರೆ ಸಿ. ಸುವರ್ಣ ಶಿವಪ್ರಸಾದ್‌, ಹಾಸನ
7. ಆಡಾಡ್ತ ಆಕಾಶ ಡಾ. ಗಿರೀಶ್‌ ಮೂಗ್ತಿಹಳ್ಳಿ, ಚಿಕ್ಕಮಗಳೂರು
8. ದಲಿತ ಸಂವೇದನೆಯ ಲೇಖಕಿ
ಡಾ. ಜಯದೇವಿ ಗಾಯಕವಾಡ ವಿಜಯಕುಮಾರ ಬಿ. ಬೀಳಗಿ, ಕಲಬುರಗಿ
9. ಡಾ. ಬಿ.ಆರ್.‍ ಅಂಬೇಡ್ಕರ್‌ : ಜೀವಂತಿಕೆಯ ಸಾಕ್ಷಿ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ, ಮೈಸೂರು
10. ಪ್ರಜಾಪ್ರಭುತ್ವದ ಶವಯಾತ್ರೆ ಡಾ. ಕೆ.ಪಿ. ಮಹಾದೇವ್ಯಯ
(ಮಹಾದೇವ ಕುಕ್ಕರಹಳ್ಳಿ), ಮೈಸೂರು
11. ತಿಳಿದು ನಡೀರಿ ಇನ್ನ ಎಸ್‌.ಬಿ. ಕುಚಬಾಳ, ಬೀದರ್

12. ಶನಿ ಶಪಥ ವಿಮುಕ್ತ ರಾಜಾಸತ್ಯವ್ರತ ಹಾಗು ಇತರೆ ನಾಟಕಗಳು ಡಾ. ಮುನಿನಾರಾಯಣ, ಕೋಲಾರ
13. ಸಮತೆಯ ಹಾಡು ಈಶ್ವರ ಸಿ. ತಡೋಳಾ, ಬೀದರ್

14. ಒಡಲಾಳದ ಕಥನಗಳು ಕೆ. ಮಹಾಂತೇಶ್‌, ಬೆಂಗಳೂರು
15. ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ್‌ ಡಾ. ಬಿ.ಆರ್.‍ಅಂಬೇಡ್ಕರ್
ಎಚ್.ಎಸ್. ಬೇನಾಳ, ಕಲಬುರಗಿ
16. ಬಸವ ಶ್ರೀ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ ಡಾ. ಗಾಂಧೀಜಿ ಸಿ. ಮೊಳಕೇರಿ, ಕಲಬುರಗಿ
17. ಡಾ|| ಬಿ.ಆರ್.‍ ಅಂಬೇಡ್ಕರ್‌ ರವರ ಚಿಂತನೆಯ ಹಾದಿಯಲ್ಲಿ ಮೌನ ಕ್ರಾಂತಿ ಪಿ. ಸಿದ್ದರಾಜು ದೊಡ್ಡರಾಯಪೇಟೆ, ಚಾಮರಾಜನಗರ
18. ಬೆಂಗಾಲಿ ರೇಖೆಗಳು ಈರಣ್ಣ ಬೆಂಗಾಲಿ, ರಾಯಚೂರು
19. ಹೆಣ್ಣಿನ ಆರೋಗ್ಯ ಆತ್ಮರಕ್ಷಣೆಗೆ ಕರಾಟೆ ಮಾಸ್ಟರ್
ಜಿ. ಪಳನಿಸ್ವಾಮಿ ಜಾಗೇರಿ, ಚಾಮರಾಜನಗರ
20. ಚಿತ್ರಕಾರನ ಬಹುಮುಖಿ ಚಿಂತನೆ ಡಾ. ಬಸವರಾಜ ಎಸ್‌. ಕಲೆಗಾರ, ಯಾದಗಿರಿ
21. ಸಮಾಜ ಪರಿವರ್ತನ ಚಿಂತನೆಗಳು ಡಾ. ಎಸ್. ನಾಗರಾಜು, ಬೆಂಗಳೂರು
22. ಅಂಬೇಡ್ಕರ್‌ ಬಹುಮುಖಿತ್ವ ಚಿಂತನೆಗಳು ಡಾ. ಎಂ. ರಾಜಪ್ಪಾಜಿ, ಮೈಸೂರು
23. ಹಟ್ಟಿ ಅರಳಿ ಹೂವಾಗಿ ಡಾ. ಓ ನಾಗರಾಜು, ತುಮಕೂರು
24. ಒಡಲ ಖಾಲಿ ಪುಟ ಕಾವೇರಿ ಎಸ್.ಎಸ್., ಹಾಸನ
25. ಪ್ರಸ್ತುತ – ಅಪ್ರಸ್ತುತ ಗಂಗಾರಾಂ ಚಂಡಾಳ, ಮೈಸೂರು
26. ಜೀವ ಜಗತ್ತು ಎಸ್. ಕಾಳಿಂಗಸ್ವಾಮಿ ಸಿದ್ಧಾರ್ಥ, ಚಾಮರಾಜನಗರ
27. ದಲಿತರ ಶೈಕ್ಷಣಿಕ ಸಬಲೀಕರಣ ಡಾ. ಚಂದ್ರಗುಪ್ತ, ಮೈಸೂರು
28. ಟ್ರಿನ್‌ ಟ್ರಿನ್‌ ಟ್ರಿನ್‌ ಮತ್ತು ಇತರೆ ನಾಟಕಗಳು ಎಂ. ಮಹಾದೇವಪ್ಪ ತಾಳಗುಂದ, ಶಿವಮೊಗ್ಗ
29. ಮೂಕ ಮನಸ್ಸು ಕಲ್ಯಾಣ ಕುಮಾರ ಎಸ್. ಪೂಜಾರಿ, ಸಿಂದಗಿ
30. ಕಾಮ್ರೇಡ್‌ ಬಸವಣ್ಣ
ರಮೇಶ್‌ ಗಬ್ಬೂರು, ಕೊಪ್ಪಳ
31. ರತ್ನ ಸುರಾ ರಹಸ್ಯ !! (ಪತ್ತೆದಾರಿ ಕಾದಂಬರಿ)
ಇಂದುಮತಿ ಲಮಾಣೀ, ವಿಜಯಪುರ
32. ಅಂತರ ಸಿ.ಎಸ್‌. ಮಲ್ಲಿಕಾರ್ಜುನ, ಕಲಬುರಗಿ
33. ಸಮಕಾಲೀನ ಸಂಗತಿಗಳ ಹಾಗೂ ಜನಪರ ವಿಷಯಗಳು ಗೌಡಗೆರೆ ಮಾಯುಶ್ರೀ, ಬೆಂಗಳೂರು
34. ಗುಳೆ ಶಿರಗಾನಹಳ್ಳಿ ಶಾಂತನಾಯ್ಕ , ಬಳ್ಳಾರಿ
35. ಉಪಕರಣ ವಿಷಯ ವಿಶ್ವಕೋಶ ಡಾ. ಎನ್‌.ಎನ್‌. ಚಿಕ್ಕಮಾದು, ಮೈಸೂರು
36. ನಸುಕು ನಗುವಾಗ ಮೌನೇಶ್‌ ಎನ್‌. ಬಿರಾಳ, ಕಲಬುರಗಿ
37. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹಾರೋಹಳ್ಳಿ ರವೀಂದ್ರ, ಮೈಸೂರು
38. ತನ್ನ ತಾನರಿದಡೆ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್‌, ಶಿವಮೊಗ್ಗ
39. ವಿಮರ್ಶೆ-ಸಂಸ್ಕೃತಿ ಚಿಂತನೆಯ ಲೇಖನಗಳು ಹುಲಿಕುಂಟೆ ಮೂರ್ತಿ, ಬೆಂಗಳೂರು
40. ಕಮ್ಯುನಿಸ್ಟರೇ ಮಾರ್ಕ್ಸ್‌‌ವಾದಕ್ಕೆ ಹಿಂತಿರುಗಿ ಹೆಚ್. ಮಾರುತಿ, ಬೆಂಗಳೂರು
41. ವೈಚಾರಿಕ ಜಿಜ್ಞಾಸೆ ಸುನಿಲ ಜಾಬಾದಿ, ಕಲಬುರಗಿ
42. ಸಾಹಿತ್ಯ ಬೆಳಕಿನಲ್ಲಿ ಪೀರಪ್ಪಾ ಬಿ. ಸಜ್ಜನ, ಬೀದರ್

43. ಆಜೀವಕ ಹಿತನುಡಿಗಳು ಶಿವರಾಜು ಎಂ., ಕೋಲಾರ
44. ದೃಶ್ಯ ಮಾಧ್ಯಮ – ಕಲೆ ಮತ್ತು ಕಲಾವಿದರು : ವಿಶ್ಲೇಷಣಾತ್ಮಕ ಪರಿಚಯ ಡಾ. ಚರಿತಾ, ಮೈಸೂರು
45. ಅನುರಣನ ಡಾ. ಸುಜಾತಾ ಚ. ಚಲವಾದಿ, ವಿಜಯಪುರ
46. ಮರೆಯದ ಮಾಣಿಕ್ಯ ವಿಠ್ಠಲ ವಗ್ಗನ್‌, ಕಲಬುರಗಿ
47. ಬದುಕು ಪ್ರಿಯವಾಗುವ ಬಗ್ಗೆ ಸುಧಾ ಚಿದಾನಂದಗೌಡ, ಬಳ್ಳಾರಿ
48. ಸಮಾಜ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಕೆ. ಶಾಂತಕುಮಾರಿ, ಬೆಂಗಳೂರು
49. ಭಾರತದ ರಾಜಕಾರಣಕ್ಕೆ ನೆಹರು ಕುಟುಂಬದ ಕೊಡುಗೆಗಳು ಡಾ. ದಯಾನಂದ ಅಪ್ಪಣ್ಣ . ಮಾನೆ, ಮೈಸೂರು
50. ಕಲ್ಲಾದವಳು ಬಿ.ಕೆ. ನಾಗರಾಜು, ಬೆಂಗಳೂರು
51. ಪ್ರಜ್ಞಾ ಕೆ.ಎಂ. ವಿಶ್ವನಾಥ ಮರತೂರು, ಕಲಬುರಗಿ

ಕನ್ನಡ ಪುಸ್ತಕ ಪ್ರಾಧಿಕಾರವು ಡಿಸೆಂಬರ್‌ – 2018ರ ಮಾಹೆಯಲ್ಲಿ ದಿನಾಂಕವನ್ನು ನಿಗದಿ ಪಡಿಸಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಿದ್ದು, ಮೇಲ್ಕಂಡ ಪ್ರಶಸ್ತಿ ಪುರಸ್ಕೃತರು ಹಾಗೂ ಬಹುಮಾನಿತರಿಗೆ ಬಹುಮಾನದ ಮೊತ್ತ, ಪ್ರಶಸ್ತಿ ಫಲಕ, ಪ್ರಶಸ್ತಿ ಪುತ್ಥಳಿ, ಶಾಲು, ಹಾರ ಹಾಗೂ ಫಲತಾಂಬೂಲವನ್ನು ನೀಡಿ ಗೌರವಿಸಲಾಗುವುದು. 2018ರ ಡಿಸೆಂಬರ್‌ ಮಾಹೆಯಲ್ಲಿ ಚೊಚ್ಚಲ ಕೃತಿಗಳ ಬಿಡುಗಡೆ ಹಾಗೂ ದಲಿತ ಸಾಹಿತಿಗಳ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ

Leave a Reply