ಹಸು, ಹುಲಿ ಮತ್ತು ಸತ್ಯ..

ರನ್ನ ಕಂದ

 

ಹಸು, ಹುಲಿ ಮತ್ತು ಸತ್ಯ…

 

ಖಡ್ಗದ ಮೇಲಿನ ರಕ್ತ ದ ಕಲೆ

ಕೇವಲ ಒಣಗಿ ಹೋದ ಸೇಡಲ್ಲ.

ಹುರಿ ಮೀಸೆಯ ಎಲ್ಲ ತಿರುವು

ಶೂರತನದ ಕುರುಹಲ್ಲ..

 

ಹುಲಿಯ ಸಾವಿಗೂ ಮುನ್ನ

ಗೋವು ಸಾಯಬಯಸಿತ್ತು..

ಹುಲಿಯ ಹಸಿವ ನೀಗಲು

ಕರುಳ ಹರಿದಿತ್ತು..

 

ಸತ್ಯ ನಂಬುಗೆಯ

ಹುಲಿಗೆ ಕಲಿಸಿತ್ತು..

ಆ ಹುಲಿ ಕಲಿತುಕೊಂಡರೂ

ಉಳಿದ ಹುಲಿಗಳಿಗೆ

ಅರ್ಥವಾಗಲಿಲ್ಲ..

 

ಕತೆಗೂ ಮೊದಲು ಸತ್ತ ಹಸುಗಳೆಷ್ಟೋ..?

ಕೊಂದ ಹುಲಿಗಳೆಷ್ಟೋ

ತಿಂದ ದಿನಗಳೆಷ್ಟೋ..

ಸುಮ್ಮನೇ ಕತೆಯಾಗುವುದಿಲ್ಲ

ಬರೆದುದೆಲ್ಲ

ಕವಿತೆಯಾಗುವುದಿಲ್ಲ..

 

ಎಲ್ಲ ಗೋಡೆಗಳಿಗೂ

ಬೆರಣಿ ತಟ್ಡಿದರೆ

ಅಂದ ತೋರುವುದಿಲ್ಲ.

2 comments

  1. ಸರ್ ಕವಿತೆ ತುಂಬಾ ಅರ್ಥಗರ್ಭಿತವಾಗಿದೆ..
    ಅಭಿನಂದನೆಗಳು

Leave a Reply