ಬಾಬಾ…

ಇಂದು ಡಿಸೆಂಬರ್ 6

ಎನ್. ರವಿಕುಮಾರ್ ಟೆಲೆಕ್ಸ್

ಬಾಬಾ ….
ನೀ ಕಟ್ಟಿ ಹೋದ, ಬಿಟ್ಟು ಹೋದ
ದಾರಿಗಳಿಗೆ ಮನುಷ್ಯರದ್ದೆ ರಕ್ತ ಮಾಂಸ – ಮೂಳೆಗಳ
ಬೇಲಿ ಬಿಗಿಯಲಾಗುತ್ತಿದೆ
ಮನುಷ್ಯರು ಮನುಷ್ಯರ ಭೇಟಿ ಆಗದಂತೆ.

ಬಾಬಾ..
ನೀ ನಿತ್ತ ಸಮತೆ- ಮಮತೆ , ಅಸೀಮ ಮಾನವತೆಯ ಸಂವಿಧಾನಕ್ಕೀಗ ರಣಹದ್ದುಗಳು ಮುತ್ತಿವೆ
ಹಂಚಿ ಉಣ್ಣುವ ಅನ್ನಕ್ಕೀಗ ಕಾರ್ಕೋಟ ವಿಷ ವಿಕ್ಕಿ
ಧರ್ಮ ನೇಯಲಾಗುತ್ತಿದೆ.

ಸಂತನೆ…
ಜಗದೊಳ್ ಸಹಜೀವನ ಪ್ರೇಮ ನಿಚ್ಚಳ. ಎಂದಲ್ತು
ನುಡಿ ನಡೆದೆ ನೀನ್. ಕುಟ್ಟಿ ಕೆಡವಿ ಸುಟ್ಟು
ಉರಿಸಿಹರು ರಕ್ಕಸ ಗಣಂಗಳ್ ಪುಟ್ಟಿ ಮೆರೆದಿಹರು ಕಾಣ್
ಎದೆಯೊಳಗೆ ಅಣುವೊಂದು ಸಿಡಿದು ಉಕ್ಕುವಾಗ
ಬುದ್ಧ ನಕ್ಕನೆಂತು?

1 comment

  1. ಎದೆಯೊಳಗೆ ಅಣುವೊಂದು ಸಿಡಿದು ಉಕ್ಕುವಾಗ
    ಬುದ್ಧ ನಕ್ಕನೆಂತು? True sir.

Leave a Reply