ಅಡುಗೆಮನೆಯಲ್ಲೊಂದು ಹುಲಿ..

ಅ.ನ.ಸುಬ್ಬರಾವ್ ಅವರ ಕಲಾಮಂದಿರದ ಅಟ್ಟದಲ್ಲಿ “ಅಭಿನಯ ತರಂಗ ” ಪ್ರತಿ ಭಾನುವಾರ ಬೆಳಿಗ್ಗೆ ರಂಗಭೂಮಿಗೆ ಸಂಬಂಧಪಟ್ಟ ಅಪರೂಪದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾಗ – ಇಡೀ ಸಾರಸ್ವತ ಲೋಕವೇ ಅಲ್ಲಿರುತ್ತಿತ್ತು.

ಅ.ನ.ಕೃ., ಟಿ.ಟಿ.ಶರ್ಮ, ಡಿ.ವಿ.ಗುಂಡಪ್ಪ, ಪ್ರೊ. ವಿ. ಸೀತಾರಾಮಯ್ಯ, ಕೆ.ಎಸ್. ನರಸಿಂಹ ಸ್ಡಾಮಿ, ಗೋಪಾಲಕೃಷ್ಣ ಅಡಿಗ ಅವರಲ್ಲದೆ ಹೊಸ ತಲೆಮಾರಿನವರ ಕೃತಿ ಬಿಡುಗಡೆ, ವಾಚನಗಳೂ ಆಗಿವೆ. ಶ್ರೀರಂಗ, ಎಂ.ವಿ. ಕೃಷ್ಣಸ್ವಾಮಿ, ಪರ್ವತವಾಣಿ, ಮಾ.ನಾ.ಚೌಡಪ್ಪ, ಪ್ರೊ.ಬಿ. ಚಂದ್ರಶೇಖರ , ಡಾ|| ಹೆ.ಚ್.ಕೆ.ರಂಗನಾಥ್, ಬಿ. ಜಯಮ್ಮ, ಹೆಚ್.ಕೆ. ರಾಮಚಂದ್ರಮೂರ್ತಿ, ಹೊನ್ನಪ್ಪ ಭಾಗವತರ್, ಬಿ.ಎನ್. ನಾಣಿ, ಬಿ.ಎಸ್.ವೆಂಕಟರಾಮ್, ಪಿ.ಲಂಕೇಶ್, ಸಿ.ಬಿ.ಜಯರಾವ್, ವಸಂತ ಕವಲಿ, ಬಿ.ವಿ.ಕಾರಂತ್, ವಿ.ರಾಮಮೂರ್ತಿ, ಬಿ.ಎಸ್. ನಾರಾಯಣ್, ಗಿರೀಶ್ ಕಾರ್ನಾಡ್, ನಿಸಾರ್ ಅಹಮದ್, ಬಿ.ಎನ್. ಚಿನ್ನಪ್ಪ, ಶಕುಂತಲಾದೇವಿ ಮುಂತಾದವರೆಲ್ಲಾ ಅಭಿನಯ ತರಂಗದ ಯತ್ನಕ್ಕೆ ನೀರೆರೆದಿದ್ದಾರೆ.

ಅಭಿನಯ ತರಂಗ 29.11.1964 ರಿಂದ ಸತತ ಎರಡು ವರ್ಷಗಳು ರಂಗಭೂಮಿಯ ಬಗ್ಗೆ ಉಪನ್ಯಾಸಗಳೂ , ನಾಟಕ ವಾಚನಗಳೂ ನಡೆದ ಕಾರ್ಯಕ್ರಮಗಳ ದಾಖಲೆಗಳಿವೆ.

ಈಗ ಕಲಾಮಂದಿರಕ್ಕೆ 100 ವರ್ಷಗಳು ತುಂಬಲಿದೆ. ಈ ಸಂದರ್ಭದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ “ಹೊಸ ಓದು – ರಂಗವೇರುವ ಮುನ್ನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ .

ಈ ಸರಣಿಯ ಮೊದಲ ಓದು ಬಿ. ಸುರೇಶ ರಚಿಸಿ ವಾಚಿಸಲಿರುವ “ಅಡುಗೆಮನೆಯಲ್ಲೊಂದು ಹುಲಿ”

3.2.19 ಭಾನುವಾರ

ಬೆಳಿಗ್ಗೆ 10 ಘಂಟೆಗೆ

ಅಭಿನಯತರಂಗದ ಆಪ್ತ ಸಭಾಂಗಣದಲ್ಲಿ . 

ಎಲ್ಲರಿಗೂ ಸ್ವಾಗತ.

Leave a Reply