ಡಾ ತೀ ನಂ ಶಂಕರನಾರಾಯಣ ಅವರಿಗೆ ‘ಗಣೆ ಗೌರವ’

ಬುಡಕಟ್ಟು ಕಾಡುಗೊಲ್ಲರ ಸಮುದಾಯ ಮೌಕಿಕ ಸಂಪ್ರದಾಯದಲ್ಲಿತ್ತು. ಸಮುದಾಯದ ಜನರ ಬಾಯಲ್ಲಿ ಪುರಾಣಗಳೇ ಇದ್ದರೂ ಲಿಖಿತ ರೂಪದ ಅಕ್ಷರಗಳಿಗೆ ದಾಖಲಿಸಿರಲಿಲ್ಲ.

ಮೊಟ್ಟಮೊದಲಿಗೆ ಅಂಥಹ ಕೆಲ ಪುರಾಣ ಕಥನಗಳನ್ನು ಸಂಶೋಧನೆ ಮೂಲಕ ದಾಖಲಿಸಿದವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದ ಶಂಕರನಾರಾಯಣರವರು.

ಆ ಮೂಲಕವೇ ಅವರು ‘ಡಾ.ತೀ.ನಂ.ಶಂಕರನಾರಾಯಣ’ ಎಂದು ಜನಪದ ಕ್ಷೇತ್ರದಲ್ಲಿ ಹೆಸರಾದರು.

ಅವರಿಗೆ ಈ ಬಾರಿ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಜುಂಜಪ್ಪನ ಮೂಲನೆಲೆ ಸಿರಾ ತಾಲ್ಲೂಕಿನ ಜುಂಜಪ್ಪನಗುಡ್ಡೆಯಲ್ಲಿ ಮಾ.೪ರಂದು ಇರುಳಿಡೀ ‌ನಡೆಯುವ ಸಾಂಸ್ಕೃತಿಕ ಜಾಗರಣೆಯಲ್ಲಿ ‘ಗಣೆ ಗೌರವ’ ನೀಡಲು ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ತೀರ್ಮಾನಿಸಿದೆ.

ಗಣೆಗೌರವದಲ್ಲಿ ಡಾ.ಶಂಕರನಾರಾಯಣರಿಗೆ ಕೊಳಲಿನ ಆದಿಮ ರೂಪದಲ್ಲಿರುವ ಗಣೆ, ಕರಿಕಂಬಳಿ ಹಾಗೂ ಐದು ಸಾವಿರ ನಗದು ನೀಡಲಾಗುವುದು.

ಜೊತೆಗೆ ಅಂದು ಮುತ್ತುಗದ ಹೂವಿನ ಪುಷ್ಪಾರ್ಚನೆಯೊಂದಿಗೆ ಜನಪದ ಆಚರಣೆಯ ಕ್ರಿಯಾವಿದಿಗಳ ಮೂಲಕ ಗಣೆ ಗೌರವ ಪ್ರಧಾನ ಮಾಡಲಾಗುವುದು.

ಕಾಡುಗೊಲ್ಲರನ್ನು ಸಂವಿಧಾನದ ಬುಡಕಟ್ಟು ಮೀಸಲಾತಿಯಡಿ ತರಲು ಪ್ರಸ್ತುತ ನಡೆಯುತ್ತಿರುವ ವಿವಿಧ ಅಧ್ಯಯನಗಳ ಹಿನ್ನಲೆಯಲ್ಲಿ ಡಾ.ತೀ.ನಂ. ಶಂಕರನಾರಯಣರ ಈ ಆಯ್ಕೆ ಅರ್ಥಪೂರ್ಣವೆಂದು ಭಾವಿಸುತ್ತೇವೆ.

-ಬಿ ಕೆ ನರಸಿಂಹರಾಜು 

Leave a Reply