fbpx

ಹಾಸ್ಯ ರಂಗೋತ್ಸವ: ಇಂದಿನ ನಾಟಕ ‘ನನ್ನ ಪ್ರೀತಿಯ ನರಕ…?!’

ಹಾಸ್ಯ ರಂಗೋತ್ಸವ ಮೂರು ದಿನಗಳ ಹಾಸ್ಯ ನಾಟಕಗಳ ಸಂಭ್ರಮ ದಿನಾಂಕ 12, 13, 14 ಅಕ್ಟೋಬರ್ 2018 ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ಪ್ರತಿ ದಿನ ಸಂಜೆ 7.00ಕ್ಕೆ ನನ್ನ ಪ್ರೀತಿಯ ನರಕ…?! ಪ್ರೀತಿಗೆ ಬರುವ ಅಡ್ಡಿ ಆತಂಕಗಳು ಒಂದೆರೆಡಲ್ಲ. ಜಾತಿ, ಧರ್ಮ,...

While the #metoo moment is gaining momentum..

While the #metoo moment is gaining momentum in the country, we have come up with an ode for the Rape victims. Title of the poem: Instructions for Rape Victims Written and Directed...

ಸಿಂಗಾಪುರದಲ್ಲಿ ಡ್ರ್ಯಾಗನ್ ಬೋಟ್ ಫೆಸ್ಟಿವಲ್

ನಮ್ಮ ದೇಶದ ಕೇರಳ ರಾಜ್ಯದಲ್ಲಿ ನಡೆಯುವ ವಳ್ಳಮ್ ಕಲಿ ಅಥವಾ ಬೋಟ್ ಗೇಮ್ ಉತ್ಸವ ನಮಗೆಲ್ಲ ಗೊತ್ತಿರುವ ವಿಚಾರ. ಎಷ್ಟೊಂದು ಜನರು, ಅವರ ಉತ್ಸಾಹ ನೋಡೋದೇ ಒಂದು ಖುಷಿ.  ಓಣಂ ಹಬ್ಬದ ಪ್ರಯುಕ್ತ ನಡೆಯುವ ಈ ಸ್ನೇಕ್ ಬೋಟ್ ರೇಸ್ ಪ್ರವಾಸಿಗರ...

ಓಲ್ಗಾ ಕಥೆ ‘ಮೃಣ್ಮಯನಾದ’

ತೆಲುಗಿನಲ್ಲಿ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಓಲ್ಗಾ ಅವರ ‘ವಿಮುಕ್ತ’ಎಂಬ ಸಂಕಲನದ ಒಂದು ಮಹತ್ವದ ಕಥೆ. ಈ ಕಥೆ  ಇದುವರೆಗೂ ಒಂಬತ್ತು ಭಾಷೆಗಳಿಗೆ ಅನುವಾದಗೊಂಡಿದೆ  ಮೃಣ್ಮಯನಾದ _________________ ತೆಲುಗು ಮೂಲ: ಓಲ್ಗಾ ಕನ್ನಡಕ್ಕೆ: ಅಜಯ್ ವರ್ಮಾ...

ಅನಿತಾ ತಾಕೊಡೆ ಹಾಗೂ ಜಯಶ್ರೀ ಕಾಸರವಳ್ಳಿ ಅವರಿಗೆ ಪ್ರಶಸ್ತಿ

‘ಜನಸ್ಪಂದನ ಟ್ರಸ್ಟ್ ಶಿಕಾರಿಪುರ’ ನೀಡುವ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ಗೆ ಅನಿತಾ ತಾಕೊಡೆಯವರ ಕವನ ಸಂಕಲನ ‘ಅಂತರಂಗದ ಮೃದಂಗ’ ಹಾಗೂ ಜಯಶ್ರೀ ಕಾಸರವಳ್ಳಿಯವರ ಕಥಾ ಸಂಕಲನ ‘ದಿನಚರಿಯ ಕಡೆ ಪುಟಗಳು’ ಆಯ್ಕೆಯಾಗಿದೆ ಎಂದು, ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದ್ದಾರೆ....

ಕಾವ್ಯಾ ಕಡಮೆಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ

ಕಾವ್ಯಾ ಕಡಮೆಗೆ 2018 ನೇ ಸಾಲಿನ ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ. ಹಿರಿಯ ಸಾಹಿತಿಗಳಾದ ರಮಜಾನ ದರ್ಗಾ, ಸುಬ್ರಾಯ ಮತ್ತಿಹಳ್ಳಿ ಮತ್ತು ಡಾ. ಎಚ್ ಎಸ್ ಅನುಪಮಾ ಅವರನ್ನೊಳಗೊಂಡ ಆಯ್ಕೆ ಸಮಿತಿ ಕಾವ್ಯಾ ಕಡಮೆಯವರ ‘ಜೀನ್ಸ್ ತೊಟ್ಟ ದೇವರು’...

ಕಾರಂತಜ್ಜನಿಗೆ..

ಡಾ.ಗೋವಿಂದ ಹೆಗಡೆ ನಿನ್ನ ಬಗ್ಗೆ ಹೇಳಹೊರಡುವುದು ಕಡಲಿಗೆ ಕೊಡುವ ಷಟ್ಪದಿಯ ದೀಕ್ಷೆಯಾದೀತೆಂಬ ಅಳುಕು ಕೃಷೀವಲ ನೀನು ಶ್ರದ್ಧೆಯಿಂದ ಮಾಡುತ್ತಲೇ ಹೋದೆ ನಾಡಿಗರೆದೆಯ ಉತ್ತುವ ಬಿತ್ತುವ ಕಾಯಕ ಹತ್ತೇ ಹದಿನೆಂಟೇ ಮುಖ ಮೊಳಕೆ ಎಲ್ಲಕ್ಕೂ ಬೆಳೆವ ಬೆಳೆಸುವ ಬದುಕ ಹಿರಿದಾಗಿಸುವ ತವಕ ಆನೆಯಂತೆ ನಡೆದೆ ಬಿಚ್ಚುತ್ತ ನಿನ್ನದೇ ದಾರಿ ;ಇಲ್ಲ ರಾಜಿ ಯಾವ ಕ್ರಿಮಿ ತಿಮಿಯ ಜೊತೆ ನಡೆಯಲ್ಲಿ ನುಡಿಯಲ್ಲಿ ಸದಾ ಎಚ್ಚರಿದ್ದವನು ತನ್ನನುಭವದ ಹಿಲಾಲೆತ್ತಿ ದಾರಿ ಕಡಿದು ನಡೆದವನು ಬಾಳ್ವೆಯೇ ಬೆಳಕೆಂದವನು,ಆದವನು ಕೆಲಸ ಮುಗಿಯಿತೆನಿಸಿದ್ದೇ ಎದ್ದೆ , ಹೊರಟೆ ಹೋದಲ್ಲೂ ನೀ ನಡೆಸಿರಬೇಕು ನಿನ್ನ ಕಾಯಕ ತಪ ‘ನೀನು ದೊಡ್ಡವ; ನಾವು ಚಿಕ್ಕವರಲ್ಲ’ ಅನ್ನುವ ಅದಟು ಉಳಿದಿದೆಯೇ ನಮ್ಮಲ್ಲಿ- ಶಂಕೆಯೆನಗೆ ಹಾಗಾಗಿಯೇ ನೂರಹದಿನಾರರಲ್ಲೂ ನೀನು ಉಳಿದಿರುವಿ ಹೊಚ್ಚ ಹೊಸತಾಗಿ ನಾವು ?

ಹೀಗೂ ಉಂಟೇ..??

ಒಂದು ಪುಸ್ತಕ ಸಮಾರಂಭ ಹೀಗೂ ಬಿಡುಗಡೆ ಮಾಡಬಹುದೇ? ಡಾ ಕೆ ಎಸ್ ಚೈತ್ರಾ ಅವರು ಪುಸ್ತಕ ಬಿಡುಗಡೆ ಮಾಡಿದ ರೀತಿ  ಮನಸ್ಸು ತುಂಬಿ ಬರುವಂತೆ ಮಾಡಿದೆ. — ನವರಾತ್ರಿಯಂದು ಮಹಿಳಾ ಕಾಳಜಿ ಪ್ರಧಾನವಾಗಿರುವ ನನ್ನ ಅಂಕಣ ಬರಹಗಳ ಸಂಕಲನ ‘ಹೊಳೆವ ಬಳೆಗಳ...