Bolt from the BLUE!! – ರಾಮಯ್ಯ ಪನ್-Fun!!

-ಸೂತ್ರಧಾರ ರಾಮಯ್ಯ

  ಕೆಟ್ಟದ್ದನ್ನು ಕೇಳೆ, ಕೆಟ್ಟದ್ದನ್ನು ಆ ಡೇ, ಕೆಟ್ಟದ್ದನ್ನು ನೋ ಡೇ ಅಂತ ಬಾಪೂಜಿಯ ಮೂರು ಮಂಗಗಳು ಮೂರು ಹೊತ್ತು ಎಷ್ಟೇ ಹೇಳಿಕೊಂಡರೂ, ಖಾದಿಯಾಟದಲ್ಲಿ ನಾಟ್ ಎ ಡೇ ಪಾಸಸ್ ವಿಥೌಟ್ ಎ ಸ್ಕ್ಯಾಂಡಲ್, ಎ ಸ್ಕ್ಯಾಮ್ ಆರ್ ಎ ರೋ! ಪುರಾಣವೂ ಪುನರಾವರ್ತನೆಯಾಗುತ್ತಲೇ- ದುರ್ಯೋಧನ ದುಷ್ ಶಾಸನ ಸಭೆಗಳೂ ಸಾಗುತ್ತಲೇ- ಅಧಿಕಾರಗಳು ಕೈಯ್ಯಾರೆ ಕಸಿದು ಹೋಗುತ್ತಲೇ(ಕ್ಲಿಪ್) ಇರುತ್ತವೆ ಮಹಾನ್ ಭಾರತದಲ್ಲಿ; ಮತದಾರನೆಂಬ ಧೃತರಾಷ್ಟ್ರನ ಸಮ್ಮುಖದಲ್ಲೇ ದುರಾದೃಷ್ಟವೆಂಬಂತೆ! ಹ್ಯಾಗೆ ಒಂದು ವಿಧಿಯೋ ( vidio) ಕ್ಲಿಪ್ಪು ರಾಜ್ಯಕ್ಕೆ ಎಕ್ಲಿಪ್ಸ್ ತಂದಿಟ್ಟಿತು ನೋಡಿ! ವಿಧಾನ ಮಂಡಲ ಮಧ್ಯದೊಳಗೆ; ಪೋರ್ನ್ ವೀಡಿಯೋ ವೀಕ್ಷಿಸುತ್ತಾ; ಚಿತ್ರಗುಪ್ತರ ಸ್ಟಿಂಗ್ ಗೆ ಸಿಲುಕಿದ ಪಾಪ! ಕೋತಿಗಳ್ ಕತೆಯಿದು! (ಅಂಬೋಣ: ಮಿಸ್ಚೀಫ್ ನಾಟ್ ಎ ಕ್ರೈಮ್?) ರಾಜ್ಯವೆಲ್ಲಾ ಅಲ್ಲೋಲ ಕಲ್ಲೋಲ- ಚಿತ್ರಗುಪ್ತರು ಕ್ಯಾ.ಕ.ರಿ.ಸಿ, ಐ ಮೀನ್, ಕ್ಯಾಮರಾ ಕಣ್ಣಿಂದ ರಿಕಾರ್ಡ್ಮಾಡಿ ಸಿಡಿಸಲು, ಹೊತ್ತಿದೇ ಕಿಡಿ, ಜನಾ ಕಿಡಿ ಕಿಡಿ! ಪರಿಣಾಮ: ಮೂವರೂ ಮಂತ್ರಿಗಳ ಸ್ಥಾನ ಚ್ಯುತಿ , ವಿರೋಧಿಗಳಿಗೆ ಮನರಂಜನೆಯ ಪರಾಕಾಷ್ಟೆ, ಆಪ್ತರಿಗೆ ಮನೊವೇದನೆಯ ಪರಾಕಾಷ್ಠೆ, ಸೆಷನ್ ಗೋ ಯಥಾಪ್ರಕಾರ ಒಂದಿಲ್ಲೊಂದು ಅಬ್ ಸೆಷನ್, ಸಾರ್ವಜನಿಕರಿಗೆ ಅಸಹ್ಯ ದಿಗ್ಭ್ರಮೆ! ವೈಜ್ಞಾನಿಕ ಆವಿಷ್ಕಾರಗಳನ್ನು, ಸಲಕರಣಗಳನ್ನು ಒಳ್ಳೆಯ ಕಾರ್ಯಕ್ಕೆ, ಲೋಕಹಿತಕ್ಕಾಗಿ ಬಳಸದೆ, ಸ್ವಾರ್ಥಕ್ಕೆ, ವಿಘ್ನ ಸಂತೋಷಕ್ಕೆ ಬಳಸಿದರೆ ಆಗುವ, ಸಂಭವಿಸುವ ಫ್ರ್ಯಾನ್ಕೈನ್ಸ್ತೈನ್ ಎಫ್ಫೆಕ್ಟ್ ನ ತಾಜಾ ಉದಾಹರಣೆ. ಹಿಡಿಗಾತ್ರದ ಮೊಬೈಲಾವತಾರ! ಗಿಳಿಯ ಮರಿಯೊಳಗೆ ನನ ಜೀವ ಎಂಬಂತೆ, ಜಯಂಟ್ ಕಿಲ್ಲರ್ ಆಗಿ ಎರಗಬಲ್ಲದು ಎಂದು ಯಾರಾದರೂ ತಿಳಿದಿದ್ದರೇನು? ಭೂತದರಮನೆಗಳ ‘ಗೋಡೆಗಳಿಗೂ ಕಿವಿಯಿದ್ದವೋ ಇಲ್ಲವೋ’ ಆದರೆ ಅಧಿಕಾರಸ್ತರ ಬಂಗಲೆ, ಕಾರ್ಯಕ್ಷೇತ್ರಗಳ ಬಳಿ ಸುಳಿವ ಗಾಳಿಗೂ ಕಿವಿ, ಕಣ್ಣುಗಳು ಮೂಡಿವೆ! ಹೋಶಿಯಾರ್! ಚಿತ್ರಗುಪ್ತರು ಜೋಕೆ. ನಿಮ್ಮ ಅಂತರಂಗವನ್ನೂ ಜನಕ್ಕೆ ತೆರೆದು ತೋರಿ,ತೂರಿಬಿಡುವರು ಜೋಕೆ – ಜೋಕಲ್ಲವಿದು. ಈ ಸಂಬಂಧ ಹುಟ್ಟಿಕೊಂಡ ಒಂದು ಪನ್ ಚ್ ನಾಮೆ ಅವಧಿ ಮಿತ್ರರಿಗೆ: ಪನ್ ಚಾಕ್ಷರಿ: ದುರಂತ (ಕರ) ನಾಟಕದ ಪಾತ್ರಧಾರಿಗಳು ಎಡವಿದ್ದು ಹೇಗೆ? ಪನ್ನುಚಾಮಿ: ಬಲವಿದ್ದು ಎಡವಿದ್ದು. ಧನ, ಅಧಿಕಾರದಮಲು. ಯಾರು, ಏನ ಮಾಡುವರು? ಅನ್ನೋ ಧೋರಣೆ. ಪಂಚಾಕ್ಷರಿ: ಅಲ್ಲಾ, ಪಕ್ಷದ ನಾಟಕದ ಸ್ಕ್ರಿಪ್ಟ್ ರಾಮಾಯಣ ಅಲ್ಲವೇನು? ಪನ್ನುಚಾಮಿ: ಆದರೆ, ನಟರು ಬಹುತೇಕ ‘ಕೃಷ್ಣಲೀಲೆ’ಯಲ್ಲಿ ಅಭಿನಯಿಸಿದವರು. ಪಾಪ ಅವರದ್ದೇನು ತಪ್ಪು.” ನಾರಿ, ಧಾರಿಣಿ, ‘ಮತ್ತು’, ಬಹುಧನದ ಸಿರಿಯೆಲ್ಲಾ ನಮಗೇ ಇರಲಿ” ಅನ್ನೋವರು- ಮೇರಾ ಭಾರತ ಮಹಾನ್..,ಕ್ಷಮಿಸು, ‘ಭಾರತ್ ಮೇರಾ’ ಅನ್ನುವ ನವ ರಾಜ ಮಗಾ ರಾಜರು! ಅಪರೂ,’ಕಿಂಗ್ ಡಸ್ ನೋ ರಾಂಗ್’ ಅನ್ನೋದನ್ನೂ ಅಪ್ರೂವ್ ಮಾಡಿ ಅನ್ನೋ ಸಗಜ ಡಿಮ್ಯಾಂಡ್. ಪಂಚಾಕ್ಷರಿ: ಸ್ಥಾನ-ಮಾನ ಕೊಡಬೇಕು ಅಂತ ಪಟ್ಟು ಹಿಡಿದು, ನಾನಾ ರೀತಿಯ ಒತ್ತಡ ತಂದು (ಇನ್ಕ್ಲೂಡಿಂಗ್ ರಕ್ತದೊತ್ತಡ) ಸ್ಥಾನ ಗಿಟ್ಟಿಸಿ, ಕ್ರಮೇಣ ತಮ್ಮ ಸ್ಥಾನದ- ಆಸ್ಥಾನದ ಮಾನವನ್ನೂ ಮಣ್ಣುಪಾಲು ಮಾಡೋದ್ಯಾಕೆ ಅಂತ ಗೊತ್ತಾಗ್ಲಿಲ್ಲಾ? ಪನ್ನುಚಾಮಿ: ಸ್ತಾನ ಸಿಕ್ಕಿದ ಮೇಲೆ, ಮಾನವನ್ನು( ಅಳತೆ, ಲಿಮಿಟೇಶನ್)ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳದೆ ಲೂಸ್, ಮ್ಯಾಡ್ ಗಳ ಥರಾ ಆಡಿ, ಸೀಸಿ ಕ್ಯಾಮರಾ ಕಣ್ಣಿಗೆ ಬಿದ್ದು, ಎರಡೂ ಕಡೆ ಸಲ್ಲದಂತೆ ಮಾಡಿಕೊಳ್ಳುವುದು ಅವರವರ ಕರ್ಮ- ಮನೋಧರ್ಮಕ್ಕೆ ತಕ್ಕಂತೆ. ಕಾಲ ದೇಶ ಅನ್ನೋ ಪರಿವೇ ಇಲ್ಲದ ಯಾವ ಪರಿವಾರಕ್ಕೂ ಪರಿವಾರವಿಲ್ಲ. ಸುತ್ತಾ ಮುತ್ತಾ ವಾಚ್ ಡಾಗ್ಸ್! ನಮ್ಮಲ್ಲಿ ಮಾತ್ರ, ( ಮಾತ್ರೆ ಜಾಪಾಳ) ಮೊದಲ್ ಯಾರ್- ನಾವೆ! ಅನ್ನೋ ಪೈಪೋಟೀವಿಯಲ್ಲಿ. ಇನ್ನು ಜನ ನಾಯಕರನ್ನ ನಂಬಿಯಾರೆ? ಗಾಡ್ಸ್ ಶುಡ್ ಸೇವ್ ದೀಸ್ ಕಿಂಗ್ಸ್! ಹೀಗೆ ಶಾರ್ಟ್ ಕಟ್ ನಲ್ಲಿ ಬಂದವರ ಅಧಿಕಾರ, ಹಾಗೆ ಕಟ್ ಶಾರ್ಟ್ ನೋ ಡೌಟ್; ಇದಕೆ ಸಂಶಯವಿಲ್ಲ. ಪಂಚಾಕ್ಷರಿ: ಆದ್ರೆ, ರೆಡ್ ಹ್ಯಾಂಡೆಡ್ ಆಗಿ ಕಂಡವರು ಇಬ್ಬರೇ, ಮೂರನೆಯವನ ತಲೆಯೂ ದಂಡ ವಾಯ್ತಲ್ಲಾ? ಅನ್ನೋ ಯಕ್ಷ ಪ್ರಶ್ನೆಗೆ ಉತ್ತರಾ? ಪನ್ನುಚಾಮಿ: ‘ಅಧಿಕಾ’ರದಮಲು ಅಧಿಕವಾದರೆ, ಅದೂ ಒಂಥರಾ ಹೂಚ್ ಟ್ರ್ಯಾಜಿಡೀಯೇ. ಕುಡಿದು ಸತ್ತವರಿಗಿಂತಲೂ ಕಳ್ಳ ಭಟ್ಟಿಯನ್ನು ಮಾರ್ ದವನ ಪಾಪದ ಪಾಲೇ ಹೆಚ್ಚುತಾನೇ? ಪಂಚಾಕ್ಷರಿ: ಅಥಣಿಯಲ್ಲಿ ಕರೆಂಟ್, ನ್ಯೂಸ್ ಪೇಪರ್, ಕೇಬಲ್ ಗಳೆಲ್ಲಾ ಕಟ್ ಅಂತೆ? ಪನ್ನುಚಾಮಿ: ಇದೊಂಥರಾ ಕಮ್ಯೂನಿ ಕೇಬಲ್ ಡಿಸೀಸ್- ರಿಪಬ್ಲಿಕ್ ಆಫ್ ಬಳ್ಳಾರಿ ಇತ್ತಂತಲ್ಲಾ? ಹಾಗೆ. ಅಧಿಕಾರ ದೊರೆಯೋದೆ ಒಂದು ಯೋಗಾಯೋಗ-ಕೈ ಜಾರಿತಲ್ಲಾ! ಮೊನ್ನೆ ಮೊನ್ನೆ ಯೋಗ ಬೇರೆ ಕಲಿಸಿದರಂತೆ. ಯೋಗನಿದ್ದೆಯನ್ನಾದರೂ ಮಾಡುತ್ತಾ ಕನಸು ಕಾಣಬಹುದಿತ್ತು; ಮನೋರೋಗಕ್ಕೆ ತುತ್ತಾಗಿ, ಲೆನ್ಸ್ ನವರ ಕೈಲಿ ಶೂಟ್ ಔಟ್ಆಗುವ ಬದಲು. ಪಂಚಾಕ್ಷರಿ: ಅಬ್ಬರಿಸಿ ಬೊಬ್ಬಿರಿಯುತ್ತಾ ಟಾಮ್-ಟಾಮ್ ಮಾಡುತ್ತಾ ತಪ್ಪಿತಸ್ತರನ್ನು ‘ಜೆರ್ರಿ’ಯುತ್ತಿರುವ ವಿರೋಧಿಗಳು ಟೆಂಪೋ ಕಾದುಕೊಳ್ತಾರಾ ಅನ್ನೋದು ಯಕ್ಷಪ್ರಶ್ನೆಯೇ? ಪನ್ನುಚಾಮಿ: ಅದು ಮಿಲಿಯನ್ ಡಾಲರ್ ಪ್ರಶ್ನೆಯೇ. ಅವರಲ್ಲೂ ಅಡ್ಡ ದಾರಿ ಹಿಡಿದ ‘ರತಿ’ ರಥ ಮಹಾರಥರು ಇರೋದ್ರಿಂದ, ಮುಂದೆ, ಬರುವ ಚುನಾವಣೆಯಲ್ಲಿ ಬಹುಮತವಿಲ್ಲದೆ ಯಾರ್ಯಾರ ಕೈ ಯಾರ್ರ್ಯಾರೋ ಹಿಡಿದು, ರಾಜಿ ಕಬೂಲಿ ಮಾಡ್ಕೊಂಡು ತಂತಮ್ಮ ತಲೆಗೆ ಬಂದಾಗ ‘ಟಾಮ್ ಅಂಡ್ ಜೆರಿ’ ಫ್ರೆಂಡ್ಸ್ ಆಗಿ ಹೋದಂತೆ ಆಗಿಬಿಡಬಹುದು. ಏನೇ ಅದರೂ ಸಧ್ಯಕ್ಕೆ ಜನ( j) ದೂರು ಮಾಡ್ತಿರೋದ್ರಿಂದ, ಆಡಳಿತ ಪಕ್ಷಕ್ಕೆ b.p ಹೆಚ್ಚಾಗಿರೋದು ನಿಜ. ಫೈನಲ್ ಮಾತು: ಪಾರ್ಟಿ ವಿಥ್ ಎ ಡಿಫ್ರೆನ್ಸ್ ಅನ್ನೋದಕ್ಕೆ ಬೇಕಾಕ್ದಷ್ಟು ದೃಷ್ಟಾಂತಗಳು, ಜನಕ್ಕೆ ಭರಪೂರ ಮನೋರಂಜನೆಗಳು, ವೇದನೆಗಳು ಸಿಕ್ಆಗಿದೆ. ಇನಫ್! ಅಧಿಕಾರ ಹೋದರೂ ಚಿಂತೆ ಇಲ್ಲಾ, ಕೆಟ್ಟದ್ದನ್ನು ನೋಡದ, ಆಡದ, ಕೇಳದ ಮೂರು ಮಂದಿ ಸಾಕು, ರಾಮರಾಜ್ಯಕೆ ದಾರಿ ಹುಡುಕಲು. ಟೈಲ್ ವ್ಯಾಗ್ ಮಾಡುವವಕ್ಕೆ, ಪೋರ್ನ್ ಗೇಟ್ನವಕ್ಕೆ ಬಾಲ ಕತ್ತರಿಸಿ, ಫೋರೆನ್ ಗೇಟ್ ಪಾಸ್ಗೆ ಹೊರಡಲಿ ಸುಗ್ರೀವಾಜ್ಞೆ; ಇಂಥ ಕ್ರಮದ ಮೂಲಕವಾದರೂ, ನಗುಮೊಗದ ನಾಯಕರು, ಕ್ಷಣವಾದರೂ ಸಿಟ್ಟುಮಾಡಿಕೊಂಡ ದೃಶ್ಯವನ್ನು ಜನ ನೋಡುವಂತಾಗಲಿ ಎಂಬ ಬಿನ್ನಹದೊಂದಿಗೆ. end ಗುಟುಕು ಆಡಳಿತ, ವಿರೋಧ ಪಕ್ಷಗಳು ಸರಿದಾರಿಯಲ್ಲಿ ಜೊತೆ ಜೊತೆಗೆ ನಡೆದಾಗ ದೇಶಾಭಿವೃದ್ಧಿ. ಅವರಿವರ, ಇವರವರ ಕಾಲೆಳೆದು ಎಡವಿದಾಗ ದ್ವೇಶಾಭಿವೃದ್ಧಿ!]]>

‍ಲೇಖಕರು G

February 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This