I MISS YOU A LOT !

“ನನ್ನ ಜೀವನದಲ್ಲಿ ಹೀಗೊಬ್ಬ ಹೀರೋ !!!”

ಡಾ ಡಿ ಟಿ ಕೃಷ್ಣ ಮೂರ್ತಿ

ಕೊಳಲು

ಇದು ಸುಮಾರು ಹತ್ತು ವರುಷಗಳ ಹಿಂದೆ ನಡೆದ ನನ್ನ ಸ್ನೇಹಿತರೊಬ್ಬರ ಕಥೆ.ಅವರ ಹೆಸರು ಇಲ್ಲಿ ಅಪ್ರಸ್ತುತ.ಆದರೆ ಅವರದು ಎಂತಹ ಅದ್ಭುತ ವ್ಯಕ್ತಿತ್ವವೆಂದರೆ ,ಅದನ್ನು ಬಣ್ಣಿಸಲು ನನ್ನ ಶಬ್ಧ ಭಂಡಾರ ಸಾಲದು !ಸುಮಾರು ನಲವತ್ತೈದು ವರ್ಷಗಳಷ್ಟು ವಯಸ್ಸಾಗಿದ್ದರೂ ಅವರ ಜೀವನೋತ್ಸಾಹ ಎಳ್ಳಷ್ಟೂ ಕುಗ್ಗಿರಲಿಲ್ಲ!ಸದಾ ಚಟುವಟಿಕೆಯಿಂದ,ಲವಲವಿಕೆಯಿಂದ ಪುಟಿಯುತ್ತಿದ್ದ ವ್ಯಕ್ತಿ.ಆಫೀಸಿಗೆ ಹೋಗುವ ಮುಂಚೆ ಮತ್ತು ಆಫೀಸಿನಿಂದ ಬಂದ ನಂತರ ಪಿ.ಯು.ಸಿ.ಹುಡುಗರಿಗೆ ಉಚಿತವಾಗಿ ಪಾಠ ಹೇಳುತ್ತಿದ್ದರು.ಅವರಿದ್ದಲ್ಲಿ ಹಾಸ್ಯ ,ನಗು!ಉತ್ಸಾಹ ಭರಿತ ಜೋರು ದನಿ. ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದೆ. ನನ್ನ ಹಿಂದೆ ಹೊಚ್ಚ ಹೊಸ ಸ್ಯಾಂಟ್ರೋ ಕಾರೊಂದು ನಿಂತಿತು.’ಬನ್ನಿ ಡಾಕ್ಟ್ರೆ…… ನನ್ನ ಹೊಸಾ ಕಾರು ಹೇಗಿದೆ ,ಡ್ರೈವ್ ಮಾಡಿ ನೋಡಿ’ ಎಂದು ಕರೆದರು.’ಅಯ್ಯೋ ಬೇಡ ಬಿಡೀ ಸರ್ ,ಇನ್ನೂ ಅಷ್ಟು ಸರಿಯಾಗಿ ಡ್ರೈವಿಂಗ್ ಬರುವುದಿಲ್ಲಾ.ಹೊಸಾ ಕಾರುಬೇರೆ !’,ಎಂದು ಹೇಳಿ ಮುನ್ನಡೆದೆ.’ಹೋ …ಹೋ ..ಡಾಕ್ಟರ್ ಆಗಿ ಇಷ್ಟೊಂದು ಭಯ ಪಟ್ಟರೆ ಹೇಗೆ ಸರ್?’ಎಂದು ಜೋರಾಗಿ ನಗುತ್ತಾ,ಡ್ರೈವ್ ಮಾಡಿಕೊಂಡು ಮುಂದೆ ಹೋದರು. ಇದಾದ ಎರಡು ತಿಂಗಳಿಗೆ ಯಾರದೋ ಮದುವೆಗೆ ರಾಯಚೂರಿನಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ತಾವೇ ಡ್ರೈವ್ ಮಾಡುತ್ತಾ ತಮ್ಮ ಮನೆಯವರೊಂದಿಗೆ ಹೊರಟರು.ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಿರುವೊಂದರಲ್ಲಿ ಅಕಸ್ಮಾತ್ತಾಗಿ ಎದುರಿಗೆ ಬಂದ ಲಾರಿಯೊಂದನ್ನು ತಪ್ಪಿಸಲು ಹೋಗಿ ಕಾರು ಪಕ್ಕದಲ್ಲಿದ್ದ ಸುಮಾರು ಹತ್ತು ಅಡಿ ಆಳದ ಹಳ್ಳಕ್ಕೆ ಪಲ್ಟಿ ಹೊಡೆಯಿತು.ಇವರು ‘ಸೀಟ್ ಬೆಲ್ಟ್ ‘ಹಾಕಿರದೆ ಇದ್ದದ್ದರಿಂದ ಕಾರಿನಿಂದಾಚೆ ಎಸೆಯಲ್ಪಟ್ಟರು.ಮಿಕ್ಕವರೆಲ್ಲಾ ಸೀಟ್ ಬೆಲ್ಟ್ ಹಾಕಿದ್ದರಿಂದ ಕಾರಿನಲ್ಲೇ ಇದ್ದರು. ಇವರು ಎದ್ದು ಕಾರಿನಲ್ಲಿದ್ದವರಿಗೆ ಸಹಾಯ ಮಾಡಬೇಕೆಂದು ಏಳಲು ಪ್ರಯತ್ನಿಸಿದರೂ ಏಳಲಾಗಲಿಲ್ಲ.ಕಾರಿನಲ್ಲಿದ್ದ ಇತರರಿಗೆ ಹೆಚ್ಚೇನೂ ಪೆಟ್ಟಾಗಿರಲಿಲ್ಲ.ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸೊಂಟದ ಮೇಲು ಭಾಗದಲ್ಲಿ spinal chord injury ಆಗಿತ್ತು.ಆಪರೇಶನ್ ಮಾಡಿದರೂ ಪ್ರಯೋಜನವಾಗಲಿಲ್ಲ.ಸೊಂಟದ ಕೆಳ ಭಾಗದಲ್ಲಿ ಅವರಿಗೆ ಯಾವುದೇ,ಚಲನೆಯಾಗಲೀ ,ಸ್ಪರ್ಶ ಜ್ಞಾನ ವಾಗಲೀ ಇರಲಿಲ್ಲ.ಮೂತ್ರವನ್ನು ತಾವೇ ‘catheter’ pass ಮಾಡಿಕೊಂಡು ತೆಗೆದುಕೊಳ್ಳಬೇಕು! ಕೈಗೆ glove ಹಾಕಿಕೊಂಡು ತಮ್ಮ ಮಲವನ್ನೂ ತಾವೇ ಹೊರತೆಗೆಯಬೇಕಾದ ಪರಿಸ್ಥಿತಿ. ಅವರು ಹೋಗದ ಆಸ್ಪತ್ರೆಯಿಲ್ಲ.ಮಾಡದ ವೈದ್ಯವಿಲ್ಲ.ಪಕ್ಕಾ ಆಶಾವಾದಿ.ಮನೆಯಲ್ಲಿಯೇ ಎರಡು ಮೂರು ತಾಸು paralyse ಆದ ಭಾಗಕ್ಕೆ physio therapy exercises ಮಾಡುತ್ತಿದ್ದರು.ಎರಡು ಮೂರು ತಿಂಗಳಲ್ಲಿಯೇ ಮತ್ತೆ ಅವರ ಚೈತನ್ಯ ಪೂರ್ಣ ನಗು ಮುಖದಲ್ಲಿ ಕಾಣಿಸಿಕೊಂಡಿತ್ತು.ಆಫೀಸಿಗೆ ವೀಲ್ ಚೇರಿನಲ್ಲಿ ಹೊಗಿಬರತೊಡಗಿದರು. ಈಗಲೂ ಅವರ physical condition ಹಾಗೆಯೇ ಇದೆ . ಆಗ ಟೆಂತ್ ಓದುತ್ತಿದ್ದ ಮಗ ಈಗ ಸ್ವತಹ ವೈದ್ಯ ನಾಗಿದ್ದಾನೆ. ನಾನು ಆ ಊರಿನಿಂದ ವರ್ಗವಾಗಿ ಬಂದು ಏಳು ವರ್ಷಗಳಾದವು.ಇತ್ತೀಚಿಗೆ ಅವರ ಫೋನ್ ಬಂದಾಗ ಅವರ ಮಾಮೂಲು ಚೈತನ್ಯ ಪೂರ್ಣ ಜೋರು ದನಿಯಲ್ಲಿ ಅವರು “ಇಲ್ಲೇ ಬಂದು ಬಿಡಿ ಡಾಕ್ಟ್ರೆ……… I MISS YOU A LOT ! ” ಎಂದಾಗ ನನ್ನ ಕಣ್ಣಂಚಿನಲ್ಲಿ ನೀರಿತ್ತು. ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.]]>

‍ಲೇಖಕರು G

April 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This