life is like hosur road

ವಿಕಾಸ ಹೆಗಡೆ

HosurRoad001ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. “life is like hosur road, there are no shortcuts!” ನಿಜ… ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ ರಸ್ತೆಯಲ್ಲಿ ಹೋಗಿ ಬಂದು ಕೆಲಸ ಮಾಡುತ್ತಾರಲ್ಲ ಎಂದು! ನಾನು ಇದುವರೆಗೂ ಕೆಲಸ ಮಾಡಿದ ಕಂಪನಿಗಳು ನಗರ ಮಿತಿಯ ಒಳಗೇ ಇದ್ದುದರಿಂದ ಓಡಾಡಲು ಅಷ್ಟೇನೂ ತೊಂದರೆಯಾಗಿರಲಿಲ್ಲ. ನಿಧಾನವಾದರೂ ತಾಸಿನೊಳಗೆ ತಲುಪುವಂತಿತ್ತು. ಆದರೆ ಈ ಹೊಸೂರು ರಸ್ತೆಗೆ ಇದೇ ಮೊದಲು ಬಂದಿರುವುದು ನಾನು. ನಾನಿರುವ ಏರಿಯಾದಿಂದ ಬಹಳ ದೂರ. ಜೊತೆಗೆ ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆಗಳೆಲ್ಲವೂ busy ರಸ್ತೆಗಳು. ಬೈಕ್ ನಲ್ಲಿ ಹೋದರೆ ತಾಸುಗಟ್ಟಲೇ ಹೋಗುತ್ತಲೇ ಇರಬೇಕು, ಹೋಗುತ್ತಾ ಹೋಗುತ್ತಾ ತಮಿಳುನಾಡಿಗೇ ಹೋಗಿಬಿಡುತ್ತೇನಾ ಅಂತ ಭಯವಾಗುತ್ತದೆ. ಸಿಟಿ ಬಸ್ಸಿನಲ್ಲಿ ಹೋದರೆ ಮಧ್ಯಾಹ್ನವಾದರೂ ತಲುಪುತ್ತೇನಾ ಇಲ್ಲವಾ ಅಥವಾ ಸಂಜೆ ವಾಪಸ್ ಹೊರಟರೆ ಮಧ್ಯರಾತ್ರಿಗಾದರೂ ಮನೆ ತಲುಪುತ್ತೇನಾ ಅಂತ ಸಂಶಯ ಶುರುವಾಗಿಬಿಡುತ್ತದೆ. ಇದು ನಗರದ ಮಿತಿಯೊಳಗೇ ಬರುವುದರಿಂದ ಕಂಪನಿಸಾರಿಗೆ ವ್ಯವಸ್ಥೆ ಇಲ್ಲ ಎಂದು ಕಂಪನಿಯವರು ಕೈಎತ್ತಿದ್ದಾರೆ.

ಮೊದಲು ನನ್ನ ಸ್ನೇಹಿತರು ಕೆಲವರು ಹೊಸೂರು ರಸ್ತೆ ಟ್ರಾಫಿಕ್ ಬಗ್ಗೆ ಹೇಳುವುದನ್ನು ಕೇಳಿದಾಗ ಅಯ್ಯೋ ಪಾಪ ಅನ್ನಿಸುತ್ತಿತ್ತು. ಈಗ ನಾನೇ ಅಯ್ಯೋ ಪಾಪ ಆಗಿದ್ದೇನೆ. ಇದನ್ನೇ ಗೆಳೆಯರಿಗೆ ಹೇಳಿದರೆ ನಿನ್ನ ಕಂಪನಿ ಬಹಳ ಹತ್ತಿರವಿದೆ, ನಿನ್ನ ಪರಿಸ್ಥಿತಿ ಎಷ್ಟೋ ಪರವಾಗಿಲ್ಲ , ಇಷ್ಟಕ್ಕೇ ನೀನು ಹೀಗೆ ಅತ್ತರೆ ದಿನಾ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಇನ್ನೂ ಮುಂದೆ ಓಡಾಡುವವರ ಪಾಡು ಗೊತ್ತಾ ಅನ್ನುತ್ತಾರೆ. ಅವರು ಹೇಳುವ ಪ್ರಕಾರ ಈಗ ಹೊಸೂರು ರಸ್ತೆ ಎಷ್ಟೋ ಪರವಾಗಿಲ್ಲವಂತೆ. ಬಹಳ ಅಗಲ ಮಾಡಿದ್ದಾರಂತೆ. ಕೆಲ ಸಿಗ್ನಲ್ಲುಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಮಾತ್ರ ತೊಂದರೆ ಇದೆಯಂತೆ. ಹೌದು, ಏನೋ ರಸ್ತೆ ಕೆಲಸ ನೆಡೆಯುತ್ತಲೇ ಇದೆ. ಅದರಿಂದಲೇ ಅರ್ಧ ಟ್ರಾಫಿಕ್ ದಟ್ಟಣೆ. ಒಂದು ಫೈ ಓವರ್ ಕಟ್ಟುವಿಕೆಯೂ ನೆಡೆಯುತ್ತಿದೆ. ಅದು ಸೀದ ಇನ್ಫೋಸಿಸ್ ಒಳಗೇ ಇಳಿಯುತ್ತದಂತೆ! 🙂 ಅದು ತಯಾರಾದ ಆದ ಮೇಲೆ ಅದರಲ್ಲಿ ಓಡಾಡಲು ಟೋಲ್ ಉಂಟಂತೆ. ಅದು ಖಾಲಿ ಹೊಡೆಯುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿದೆ.

ನೋಡಬೇಕು. ಪಾಪ, ಇಂತ ರಸ್ತೆಗಳಲ್ಲಿ ದಿನವಿಡೀ ಬಸ್ ಓಡಿಸುವ ಬಿ.ಎಂ.ಟಿ.ಸಿ ಬಸ್ ಚಾಲಕರ ಶ್ರಮಕ್ಕೊಂದು ದೊಡ್ಡ ನಮಸ್ಕಾರ. peak hourನಲ್ಲಿ ಇಂಚಿಂಚಾಗಿ ಚಲಿಸುವುದಿದೆಯಲ್ಲ ಅದು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಸಂಜೆ ಎಲ್ಲರಿಗೂ ಮನೆಗೆ ಹೋಗಲು ಅದೇನೂ ಅವಸರವೋ. ಬಸ್, ಕಾರು, ಬೈಕ್ ಗಳಲ್ಲಿ ಎಲ್ಲರೂ ಹೇಗೆಗೆ ಆಗುತ್ತದೋ ಹಾಗೆಲ್ಲಾ ನುಗ್ಗುವುದನ್ನೂ ನೋಡಿಯೇ ಆನಂದಿಸಬೇಕು! ಅಲ್ಲೇ ಹತ್ತಿರದಲ್ಲಿ ಮನೆ ಮಾಡೋಣವೆಂದರೆ ನಾನಾ ತೊಡಕುಗಳು.

ದಿನಾ ೩-೪ ತಾಸು ರಸ್ತೆಯಲ್ಲಿ ಕಳೆಯುವುದಿದೆಯಲ್ಲ, ಅದರಂತಹ ಟೈಮ್ ವೇಸ್ಟು ಬೇರೆ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಎಂತವನ ಸತ್ವವನ್ನೂ, ಉತ್ಸಾಹವನ್ನೂ ಉಡುಗಿಸಿಬಿಡುತ್ತದೆ…….ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ ಒಳ್ಳೆ ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? ಗೊತ್ತಿಲ್ಲ, ಕಾದು ನೋಡಬೇಕು. 🙂

‍ಲೇಖಕರು avadhi

August 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

  1. shama

    ಎಲ್ಲಿಗೆ ಹೋದರು ಒಳ್ಳೆ ಹುಡುಗ ಆಗಿದ್ರೆ ಸಾಕಪ್ಪಾ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: