May be… I am just like that

ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ ‘ಮ್ಯಾಜಿಕ್ ಕಾರ್ಪೆಟ್ ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು.

ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ.

ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ

 

highres_2766506

ಸಂವಾದಕ್ಕೆ ಹಾಜರಾಗದೇ ಇದ್ದದ್ದಕ್ಕೆ ಈಗ ವಿಪರೀತ ಸಂಕಟವಾಗುತ್ತಿದೆ! ಸಂದೀಪ್ ನಿಮ್ಮ ಲೇಖನ ಕಲ್ಪಿತ ಸಂದರ್ಶನ ಅಂತ ನೀವೇ ಹೇಳಿಕೊಂಡಿದ್ದರೂ ಪ್ರಾಯಶಃ ಇದಕ್ಕಿಂತ ಒಳ್ಳೆಯ ಉತ್ತರ ನಿಜವಾಗಿ ನಡೆಸಿದ ಸಂದರ್ಶನಕ್ಕೂ ಸಿಗುತ್ತಿರಲಿಲ್ಲ. ಎಲ್ಲರೂ ಹೊಗಳುವ ಸತ್ಯಜಿತ್ ರೇ ಹಾಗೇ ಇಂಗ್ಲಿಷ್ ನಲ್ಲಿ ಬರೆಯುತ್ತಿದ್ದ/ಬರೆಯುತ್ತಿರುವ ಬಹುತೇಕರು ಹರಿದ ಪ್ಯಾಂಟನ್ನು ಹೊಲಿಸುವ ಬದಲು ವಾಸ್ತವ ಅಂತ ಹೇಳುತ್ತ ತಮ್ಮ ಬೇಳೆ ಬೇಯಿಸಿಕೋತ ಅವಾರ್ಡು ಗಿವಾರ್ಡು ಪಡೀತಿದಾರೆ. ನಿಮ್ಮ ಬದ್ಧತೆ ಹೀಗೇ ಇರಲಿ

-ಡಿ.ಎಸ್.ರಾಮಸ್ವಾಮಿ

+++

ಸಂದೀಪ್ ಸರ್ , ನಾನು ಆ ಸಿನಿಮಾ ನೋಡಿದ್ದೀನಿ…. ನಿಮ್ಮ ಸಂದರ್ಶನ ಓದಿದೆ…ಕಾಮೆಂಟಿಗರಿಗೆ ಬರೆದ ಪ್ರತಿಕ್ರಿಯೆ ಕೂಡ. ಬಟ್ಟೆ ಹರಿದುದರ ಬಗೆಗಿನ ಸಂಕೊಚವಷ್ಟೇ ನನಗಿದ್ದಿದ್ದು ಅಂತ ಹೇಳಿ,ಬೇರೆ ‘ಇನ್ನೇನೋ ಹೇಳಲಾಗದೆ ಸಂದರ್ಭಕ್ಕೆ ‘ಆರೋಗ್ಯಪೂರ್ಣ ಮಂಗಳ ಹಾಡಿದ್ದೀರಿ’. ತಮ್ಮ ಬದ್ಧತೆಯ ಬಗ್ಗೆ ಅಪಾರ ಗೌರವವಿದೆ. ಅಮ್ಮ ಹೇಗಿದ್ದರೂ ಯಾವತ್ತಿದ್ದರೂ ಅಮ್ಮನೇ. ಅವಳಿಗೆ ನೋವಾದಾಗ, ಖಾಯಿಲೆ ಬಂದಾಗ ಗುಣಪಡಿಸಲು ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಅಷ್ಟೆ .

-ಸುನಿಲ್ .

+++

ನೀಲಾಂಜಲ,

ನೀವು ನಿಮ್ಮ ದೊಡ್ಡಮ್ಮನ ಮಗಳಿಂದ ಫ್ಯಾಶನ್ ಲೋಕದ ಬಗ್ಗೆ ಅರಿತದ್ದು ತುಂಬಾ ಒಳ್ಳೆಯ ಸಂಗತಿ.
ಖಂಡಿತ ನನಗೆ ಫ್ಯಾಶನ್ TV(FTV) ಯ ಫ್ಯಾಶನ್ ಗಳು ಅರ್ಥ ಆಗಲ್ಲ. ಅದಕ್ಕೇ ನಾನು ಅದನ್ನು ಅರ್ಧ ರಾತ್ರಿಯ ನಂತರವೇ ನೋಡೋದು ಆ ಹೊತ್ತಿನಲ್ಲಿ ಬಟ್ಟೆಗಳು ತೀರಾ ಕಮ್ಮಿ ಇರೋದ್ರಿಂದ ಅದನ್ನು ಬಹಳಷ್ಟು ಸರಳವಾಗಿ ಅರ್ಥೈಸಲು ನಂಗೆ ಸಹಕಾರಿಯಾಗಿದೆ. ಇನ್ನೂ ಚೆನ್ನಾಗಿ ಅರ್ಥೈಸಲು ಆಗಬಹುದೇನೋ ಅಂತ ಒಂದು ದಿನ ಬೆಳಿಗ್ಗೆ ಮೂರು ಘಂಟೆಯ ತನಕ ಕೂತಿದ್ದೂ ಇದೆ ಆದ್ರೆ ಇನ್ನೂ ಸರಳಗೊಳಿಸಲು ಸುಶ್ಮಾ ಸ್ವರಾಜ್ ರ ನಿರ್ಬಂಧನೆಯಿದೆಯಂತೆ!

ಅವಧಿ,

ನಿಜವಾಗಿಯೂ ನಂಗೆ ಸ್ಲಂ ಡಾಗ್ ಬಗ್ಗೆ ಚರ್ಚೆ ಮಾಡಲಿ ಇಷ್ಟವೇ ಇರಲಿಲ್ಲ. ಯಾಕಂದ್ರೆ ಎಲ್ಲರೂ ಆ ಸಿನೆಮಾವನ್ನು ’ಎಂಜಾಯ್’ ಮಾಡಿದ ಹಾಗೆ ನಂಗೂ ಎಂಜಾಯ್ ಮಾಡೋ ಆಸೆ ಇದೆ.
ಆದ್ರೆ ಬ್ಲೂ ಫಿಲಂ ನೋಡೊ ತಂದೆಯೊಬ್ಬ, ಈ ಫಿಲಮ್ ಅನ್ನು ನನ್ನ ಮಗ ನೋಡಿ ಬಿಟ್ರೆ ಏನ್ ಗತಿ ಅನ್ನೋ ಭಯ, ಸಂಕೋಚದಿಂದ ಸಿ.ಡಿಯನ್ನು ಭದ್ರವಾಗಿ ಬಚ್ಚಿಡುತ್ತಾನಲ್ಲ ಅದೇ ರೀತಿ ’ಸ್ಲಂ ಡಾಗ್ ’ಅನ್ನೋ ’ಭಾರತದ ನೈಜ ಪರಿಸ್ಥಿತಿ’ಯನ್ನು ಬಿಂಬಿಸುವ ಸಿನೆಮಾ ನೋಡಿ ಪರದೇಶದವರು (ನಮ್ಮ ದೇಶದವ್ರು ಎಷ್ಟೆ ನೋಡ್ಲಿ ನಂಗೆ ಬೇಜಾರಿಲ್ಲ ಇಂಥ ಹತ್ತು ಧಾರಾವಿಗಳನ್ನು ನೋಡಿಯೂ ಇಂಟರ್ವಲ್ ನಲ್ಲಿ ನೆಮ್ಮದಿಯಾಗಿ ಸಮೋಸ ತಿನ್ನುವವರು ನಾವು!) ನೋಡಿ ಏನ್ ಅಂದುಕೋತಾರೋ ಅನ್ನೋ ಒಂದು ಅನಾವಶ್ಯಕ ’ಎಳಸು’ ಆತಂಕ ನನ್ನದಾಗಿತ್ತು ಅಷ್ಟೇ.

ಹೊರದೇಶದವರ ರೆಸ್ಪಾನ್ಸ್ ಈ ಸಿನೆಮಾಗೆ ಹೇಗಿರುತ್ತೆ ಎಂಬ ಕುತೂಹಲದಿಂದ ಗೂಗಲ್ ಸರ್ಚ್ ಮಾಡಿದ್ರೆ ಬಾರ್ಬರಾ ಅನ್ನೋರ ಕಮೆಂಟ್ ನೋಡಿದೆ.

“ಪ್ರೀತಿಯ ಡ್ಯಾನಿ,
ನಿನ್ನೆ ನಾವು ನಿನ್ನ ಸಿನೆಮಾ ನೋಡಿದೆವು.ಅದ್ಭುತವಾಗಿತ್ತು.ಸಿನೆಮಾ ಮುಗಿದ ಮೇಲೆ ಡಿನ್ನರ್ ಗಾಗಿ ಹೋಟೇಲಿಗೆ ಹೋದ್ವಿ.ಆದ್ರೆ ಊಟ ಮಾಡ್ತಾ ಇದ್ದ ಹಾಗೆ ಆ ಸ್ಲಂ ಮಕ್ಕಳ ಮುಖ ನೆನಪಾಯ್ತು. ನಾವೇನೋ ತುಂಬಾ ಶ್ರೀಮಂತರು ಇಂಥ ಹೋಟೇಲಲ್ಲಿ ಡಿನ್ನರ್ ಮಾಡ್ತೀವಿ, ಆದ್ರೆ ಆ ಕಂದಮ್ಮಗಳು ಊಟವಿಲ್ಲದೇ ಆ ಸ್ಲಂ ನಲ್ಲಿ ದಿನ ಕಳೀತಾರಲ್ವ ಅನ್ನೋ ನಿರಾಸೆ ಉಂಟಾಗ್ತಾ ಇದೆ. ನಾವು ಆ ಸ್ಲಂ ಮಕ್ಕಳಿಗೆ ಏನಾದ್ರೂ ಮಾಡಬೇಕಲ್ಲ?
-ಬಾರ್ಬರಾ”

ಬಾರ್ಬರಾಳ ಉದ್ದೇಶ ಉದಾತ್ತವಾದದ್ದು . ಬಹುಷ ಇಂಥ ಉದ್ದೇಶಗಳು ಸರಿಯಾಗಿ ಕಾರ್ಯನಿರತವಾದ್ರೆ ನಾನೂ ಡ್ಯಾನಿಯ ಕಾಲಿಗೆ ಬೀಳಬಹುದೇನೋ.

ಆದ್ರೆ ಹೀಗಾಗುತ್ತಾ?

ನಾಳೆ ಇದೇ ಸ್ಲಂ ಮಕ್ಕಳ ಅಭಿವೃದ್ಧಿಯ ಹೆಸರಲ್ಲಿ ನೂರಾರು ಸಂಸ್ಥೆಗಳು ಹುಟ್ಟಿಕೊಳ್ತಾವೆ.ಹೊರದೇಶದವರಿಗೆಲ್ಲ ಒಂದು ’ಸ್ಲಂ ಡಾಗ್ ಮಿಲೆನಿಯರ್ ’ನ ಡಿ ವಿ ಡಿ ಕೊಟ್ಟು ಈ ಅಕೌಂಟ್ ಗೆ ನಿಮ್ಮ ಡೊನೇಶನ್ ಕಳಿಸಿ ಅಂತ ಹೇಳ್ತಾನೇ ಹಲವರು ಕಾಸು ಮಾಡ್ಕೋತಾರೆ .ಹಾಗೆ ಮಾಡಿದ ಕಾಸಿನಲ್ಲಿ ತಮ್ಮ ಅಪಾರ್ಟ್ಮೆಂಟ್ ಕಟ್ಟಿ ಅದಕ್ಕೆ ’ಸ್ಲಂ ಡಾಗ್ ನಿಲಯ’ ಅಂತ ಹೆಸರಿಟ್ಟುಕೊಳ್ತಾರೆ.
ಆದ್ರೆ ಆ ದಾರಾವಿಯ ಸ್ಲಂ ಮಾತ್ರ ಇನ್ನಷ್ಟು ಜಮಾಲ್ ಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತೆ.ಆದ್ರೆ ಆ ’ರಿಯಲ್ ಜಮಾಲ್’ ಮಾತ್ರ ಮಿಲೆನಿಯರ್ ಆಗೋದೇ ಇಲ್ಲ !

ಕವಿ ಇಕ್ಬಾಲ್ ’ಸಾರೇ ಜಹಾಂ ಸೇ ಅಚ್ಚಾ ಹಿಂದೂಸಿತಾ ಹಮಾರ ’ ಅಂತ ಬರೆದಾಗಲೂ ಭಾರತದಲ್ಲಿ ದಾರಿದ್ರ್ಯ ಇತ್ತು.ಆದ್ರೆ ಆ ಕವಿ ಸುಳ್ಳೆ ಸುಳ್ಳು ಬರೆದ.
’ಸಾರೇ ಏಶಿಯಾ ಮೇಂ ದೇಖೋ ಧಾರಾವಿ ಸ್ಲಂ ಬಡಾ ಹಮಾರ ’ ಅಂತ ಬರೀಲಿಲ್ಲ. ಕವಿ ಇಕ್ಬಾಲ್ ರಂಥ ಸುಂದರ ಭಾರತದ ಕಲ್ಪನೆಯಷ್ಟೆ ನನ್ನದು .

ಅದಕ್ಕಿಂತ ದರಿದ್ರ ಸತ್ಯವಿದ್ರೆ ನನ್ನನ್ನೂ ಕವಿ ಇಕ್ಬಾಲ್ ರ ಹಾಗೆ ಸುಳ್ಳು ಜಗತ್ತಿನಲ್ಲಿ ಬದುಕಲು ಬಿಡಿ.

ಓಹ್ ತುಂಬಾನೆ ನೆಗೆಟಿವ್ ಥಿಂಕರ್ ಹಾಗೂ ಸ್ಯಾಡಿಸ್ಟ್ ಅಲ್ವಾ ನಾನು.

May be……. I am just like that )

ಸಂದೀಪ್ ಕಾಮತ್

+++

ನೀಲಾಂಜಲ ಅವರು FTV ಬಗ್ಗೆ ಹೇಳಿದ್ದಾರೆ. but, ಫ್ಯಾಶನ್ Ramp ಹಾಗೂ ಫ್ಯಾಶನ್ ಶೋ ಇರೋದು ನೀವು ಹೇಳಿದ ಕಾರಣಗಳಿಗೆ ಅಂತ ಅನ್ನೋದು ಸರಿ….ಆದ್ರೆ..ಇದು ಇಷ್ಟಕ್ಕೇ ಆಗಿದ್ರೆ ಒಂದು ಸ್ಪೆಷಲ್ ಚಾನಲ್ ಆಗ್ತಾ ಇರಲಿಲ್ಲ.. ಮತ್ತೆ ನೀವೇ ಹೇಳಿ… ಫ್ಯಾಶನ್ ಶೋ ನೋಡಿ ಡಿಸೈನ್ ಮಾಡೋ ಜನ ಪ್ರೋಗ್ರಾಮ್ ಗೇ ಹೋಗಿರ್ತಾರೆ . ಇದನ್ನ ಎಲ್ಲರ ಮನೇಲಿ ತೋರ್ಸೋ ಅಗತ್ಯ ಇಲ್ಲ.

ಅದಕ್ಕೆ ಅಷ್ಟೊಂದು ಫೇಮಸ್ ( ???!!!) ಮಾಡೆಲ್ಸ್ (specially ಹುಡ್ಗೀರು ಪಾಪ ಈಗೀಗ ಹುಡುಗರಿಗೆ ಛಾನ್ಸ್ ಸಿಕ್ತಾ ಇದೆ) ಅಗತ್ಯ ಖಂಡಿತಾ ಇಲ್ಲ ಆಲ್ವಾ. 90% ಜನ ಯಾಕೆ FTV ನೋಡ್ತಾರೆ ಅನ್ನೋದು ನಗ್ನ ಸತ್ಯ ಸರ್ . (Fashion industry ಗೆ ರಿಲೇಟ್ ಆಗಿರೋ ಕೆಲಸ ಮಾಡ್ತಾ ಇರೋದ್ರಿಂದ ಇದನ್ನ ಬರೀತಾ ಇದ್ದೀನಿ).

Coming to the point…Slum-Dog-Millionaire ಒಂದು ನೋಡಿ creativity and Concept ಬಗ್ಗೆ ಖುಷಿ ಪಡೋ ಅಂತ ಬಹಳ indian films ಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ. ಇದಕ್ಕೆ ಇಷ್ಟೊಂದು importance ಸಿಗುತ್ತೆ ಅಂತ ಎಕ್ಸ್ಪೆಕ್ಟ್ ಮಾಡಿರಲಿಲ್ಲ.

Anyway…”Oscar” ಗೆ ನಾಮಿನೇಟ್ ಆಗಿದ್ರಿಂದ ಇಷ್ಟೊಂದು ಕುಶಿ ಬೇಸರ ಎಲ್ಲಾ. OSCAR ಗೆ ನಾಮಿನೇಟ್ ಆಗಲಿಕ್ಕೆ exceptional ಬಿಟ್ಟು ಬೇರೆ ರೀಸನ್ಸ್ ಬಹಳ ಇದೆ ಆಲ್ವಾ ????

-Ravichandra

+++

ಹೇಯ್ ಸಂದೀಪ್,

“ಓಹ್ ತುಂಬಾನೆ ನೆಗೆಟಿವ್ ಥಿಂಕರ್ ಹಾಗೂ ಸ್ಯಾಡಿಸ್ಟ್ ಅಲ್ವಾ ನಾನು.” ಹೀಗೆಲ್ಲಾ ಬೇಜಾರು ಮಾಡಿಕೋಬೇಡಿಯಪಾ. ನಿಮ್ಮ ’ಎಳಸು’ ಆತಂಕ ಅರ್ಥವಾಗುತ್ತೆ.

“ಆ ’ರಿಯಲ್ ಜಮಾಲ್’ ಮಾತ್ರ ಮಿಲೆನಿಯರ್ ಆಗೋದೇ ಇಲ್ಲ !” ಎಂಬುದು ಕೂಡ. ಏಶಿಯಾ ಮೇಂ ಧಾರಾವಿ ಸ್ಲಂ ಬಡಾ ಎಂಬುದು ಸತ್ಯ. ಹಾಗೇನೆ “ಸಾರೇ ಜಹಾಂ ಸೇ ಅಚ್ಚಾ ಹಿಂದೂಸಿತಾ ಹಮಾರ” ಕೂಡ ಭಾರತೀಯರಿಗೆ ಸತ್ಯ.

-neelanjala

‍ಲೇಖಕರು avadhi

January 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

೧ ಪ್ರತಿಕ್ರಿಯೆ

  1. neelanjala

    ಹೇಯ್ ಸಂದೀಪ್,
    “ಓಹ್ ತುಂಬಾನೆ ನೆಗೆಟಿವ್ ಥಿಂಕರ್ ಹಾಗೂ ಸ್ಯಾಡಿಸ್ಟ್ ಅಲ್ವಾ ನಾನು.” ಹೀಗೆಲ್ಲಾ ಬೇಜಾರು ಮಾಡಿಕೋಬೇಡಿಯಪಾ. ನಿಮ್ಮ ’ಎಳಸು’ ಆತಂಕ ಅರ್ಥವಾಗುತ್ತೆ. “ಆ ’ರಿಯಲ್ ಜಮಾಲ್’ ಮಾತ್ರ ಮಿಲೆನಿಯರ್ ಆಗೋದೇ ಇಲ್ಲ !” ಎಂಬುದು ಕೂಡ. ಏಶಿಯಾ ಮೇಂ ಧಾರಾವಿ ಸ್ಲಂ ಬಡಾ ಎಂಬುದು ಸತ್ಯ. ಹಾಗೇನೆ “ಸಾರೇ ಜಹಾಂ ಸೇ ಅಚ್ಚಾ ಹಿಂದೂಸಿತಾ ಹಮಾರ” ಕೂಡ ಭಾರತೀಯರಿಗೆ ಸತ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: