ಅವಧಿ ೧೪ರ ವಸಂತ

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು. ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ ಸಲ್ಲಬೇಕು. ಹೈದರಾಬಾದ್ ನ ರಾಮೋಜಿ...

‘ಚಂದ್ರಕೀರ್ತಿ’ ಗಣಪ

‘ಚಂದ್ರಕೀರ್ತಿ’ ಗಣಪ

ಗಣೇಶನ ಹಬ್ಬ ಬಂತು ಎಂದರೆ ಸಾಕು ಚಂದ್ರಕೀರ್ತಿ ಈ ಬಾರಿ ಯಾವ ರೀತಿ ಗಣೇಶ ಮಾಡಬಹುದು ಎಂದು ಕಾದು ಕೂರುವ ದೊಡ್ಡ ಬಳಗವೇ ಇದೆ. ಯಾಕೆ ಅಂತೀರಾ...? ಚಂದ್ರಕೀರ್ತಿ ಗಣೇಶನ್ನ ಯಾವುದರಲ್ಲಿ...

ಸಂಪಾದಕರ ನುಡಿ

Editorial

ಎಲ್ಲ ಸರಿಯಾಗಿದೆ ಎಂಬಂತೆ ಕಾಣುವ ಈ ಕಾಲದಲ್ಲಿ…

ಎಚ್‌ ಎನ್ ಆರತಿ ಎಲ್ಲ ಸರಿಯಾಗಿದೆ ಎಂಬಂತೆ ಕಾಣುವ, ಭಾಸವಾಗುವ, ಚಂದದ ಬಣ್ಣ ಹೊತ್ತ, ಯಾವಾಗ ಬೇಕಾದರೂ ಬೀಳಬಹುದಾದ ತೇಪೆ ಹಚ್ಚಿದ ಬಿರುಕು ಗೋಡೆಗೆ ಒರಗಿ ನಿಂತಂತೆ ಭಾಸವಾಗುತ್ತಿದೆ. ಕೋವಿಡ್, ಅನಪೇಕ್ಷಿತ ವೇಗದಲ್ಲಿ ಓಡುತ್ತಿದ್ದ ಬದುಕಿಗೆ ಹಠಾತ್ತಾಗಿ ಹಾಕಿದ ಹ್ಯಾಂಡ್ ಬ್ರೇಕ್. ಸರಿಯಾದ ಬ್ರೇಕ್ ಇಲ್ಲದೆ, ವೇಗವಾಗಿ ಚಲಿಸುವ ಗಾಡಿಗೆ ಹ್ಯಾಂಡ್ ಬ್ರೇಕ್ ಹಾಕಿದರೆ, ಏನೇನು ಅನಾಹುತವಾಗಬಹುದೋ ಕೋಟ್ಯಂತರ ಜೀವಿಗಳ ಬದುಕಿಗೆ ಅವೆಲ್ಲಾ ಆಗಿದೆ. ಶೀಟ್ ಹೊದಿಸಿ, ಹಗ್ಗಕಟ್ಟಿ ಮೂಲೆಯಲ್ಲಿ ನಿಲ್ಲಿಸಿರುವ ತರಕಾರಿ ತಳ್ಳುಗಾಡಿಯಿಂದ ಹಿಡಿದು, ಒಂದೇ ಸಮನೆ ಸೈರನ್ ಕಿರುಚುತ್ತಾ ಹೋಗುವ ಆಂಬುಲೆನ್ಸ್ ವರೆಗೆ ಕಣ್ಣು ನೋಯುವಷ್ಟು, ಮನಸ್ಸು ತಳಮಳಿಸುವಷ್ಟು ದಾರುಣ ಕತೆಗಳ ಕೊಲಾಜ್ ಚಿತ್ರಗಳು ಮಲಗಲು ಬಿಡುತ್ತಿಲ್ಲ. ಇವೆಲ್ಲದರ ನಡುವೆ ತುಂಬಾ ಜನರಿಗೆ ಈ...

ಮತ್ತಷ್ಟು ಓದಿ
ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು ಕೇಳಿ ತಳ್ಳಿ ಹಾಕುವುದು ಸುಲಭ. ಆದರೆ ಹೆಸರಿನ ಪ್ರಾಮುಖ್ಯತೆಯು ಅದನ್ನು ಅರಿತುಕೊಂಡವರಿಗಷ್ಟೇ ಗೊತ್ತು. ಒಂದು ಚಂದದ ಲೇಖನಕ್ಕೋ, ಕಥೆಗೋ ಇಡುವ ಆಕರ್ಷಕ ಟೈಟಲ್ ಆ ಪ್ರಕಾರಕ್ಕೆ ತನ್ನದೇ...

ಕುಂಬಾರನ ಹೆಂಡತಿಯ ಮೂರ್ತಿ ಹುಡುಕುತ್ತ…

ಕುಂಬಾರನ ಹೆಂಡತಿಯ ಮೂರ್ತಿ ಹುಡುಕುತ್ತ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

ದಿಲ್ಲಿ ಡೈರಿ: ಚಳಿ ಮತ್ತು ರೈತರ ಹೋರಾಟದ ಬಿಸಿ

ದಿಲ್ಲಿ ಡೈರಿ: ಚಳಿ ಮತ್ತು ರೈತರ ಹೋರಾಟದ ಬಿಸಿ

ನವೀನ್‌ ಕುಮಾರ್ ರಾತ್ರಿ ಸುಮಾರು 11 ಗಂಟೆಗೆ ಮಲಗುವಾಗಲೇ ಚಳಿಯ ಪರಿಚಯವಾಗುತ್ತಿತ್ತು. ಬೆಳಗಿನ ಜಾವ 4 ಗಂಟೆಯ ಆಸುಪಾಸು ಚಳಿ ಎನ್ನುವುದು ದೇಹದ ಮಾಂಸಖಂಡಗಳನ್ನು ಸೀಳಿ ನರನಾಡಿಗಳನ್ನು ನುಗ್ಗಿ ಮೂಳೆಗಳನ್ನು ತಾಗುತ್ತಿತ್ತು. ‌ಈ ಚಳಿಯನ್ನು ತಡೆಯಲಾರದೆ ಎದ್ದು ನೋಡಿದರೆ ರೈಲು ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ನಲ್ಲಿತ್ತು. ನಮ್ಮ...

ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಪೂರ್ಣಚಂದ್ರ ತೇಜಸ್ವಿ ಅವರ ʼಅಣ್ಣನ ನೆನಪುʼ ಕೃತಿಯನ್ನು ರಂಗಕರ್ಮಿ ರಂಗಸ್ವಾಮಿ ಎಸ್‌ ಅವರು ನಾಟಕ ರೂಪದಲ್ಲಿ ತಂದು, ನಾಟಕವು ಯಶಸ್ವಿ 12 ಪ್ರದರ್ಶನಗಳನ್ನೂ ಕಂಡಿದೆ. ಈಗ ಅದು ಕೃತಿಯಾಗಿ ಬಿಡುಗಡೆಯಾಗಿದೆ. ವಿಮರ್ಶಾಕರಾದ ಡಾ. ಬೈರಮಂಗಲ ರಾಮೇಗೌಡ ಅವರು ಕೃತಿಯನ್ನು...

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...

ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..

ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

ಬಾ ಕವಿತಾ

ಪಾದಗಳಿಗೆ ನಾನು ಋಣಿ

ಪಾದಗಳಿಗೆ ನಾನು ಋಣಿ

ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು ಚುಂಬಿಸುತ್ತೇನೆಯಾಕೆಂದರೆ ಅವು ಕಲ್ಲು ಮುಳ್ಳುಗಾಜಿನ...

ಎಲ್ಲಿ ಬಿದ್ದಿತೋ ನನ್ನ ನತ್ತು

ಎಲ್ಲಿ ಬಿದ್ದಿತೋ ನನ್ನ ನತ್ತು

ಸ್ಮಿತಾ ಶೆಣೈ ಮದುವೆಯಾದ ಲಗಾಯ್ತು ಮೂಗಲ್ಲೇ ಇತ್ತುರಾತ್ರಿ ಹಗಲು ಎಲ್ಲ ಹೊತ್ತುಬೆಳಕು ಬೀಳಲು ಥಳಥಳ ಹೊಳೆಯತಿತ್ತುಎಲ್ಲಿ ಬಿದ್ದಿತೋ ನನ್ನ ನತ್ತು ಮಾವನ ಮುಂಗೋಪದ ಮುಖಕ್ಕೆ...

‍ಪುಸ್ತಕದ ಪರಿಚಯ

Book Shelf

ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ

ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ

ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ ಮೂಡಬಹುದು ಯೋಚಿಸಿ ನೋಡಿ. "ಹಾಗಾದರೆ, ನೀವು ದೆವ್ವಗಳನ್ನು ನಂಬುವುದಿಲ್ಲ ಅನ್ನಿ ಎಂದು ಉದ್ಗರಿಸಿದ ಸಹಪ್ರಯಾಣಿಕ ಮಾಯಾವಾದ.""ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ...

ಮತ್ತಷ್ಟು ಓದಿ
‘ಪ್ರಭುತ್ವ, ಧರ್ಮ ಮತ್ತು ಜನತೆʼ

‘ಪ್ರಭುತ್ವ, ಧರ್ಮ ಮತ್ತು ಜನತೆʼ

ಡಾ. ವಡ್ಡಗೆರೆ ನಾಗರಾಜಯ್ಯ ಆತ್ಮೀಯರೇ, ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ 'ಪ್ರಭುತ್ವ, ಧರ್ಮ ಮತ್ತು ಜನತೆʼ ಎಂಬ ಸಂಶೋಧನಾ ಗ್ರಂಥದ ಮುಖಪುಟ ಇದು. ಇದರ ಕರ್ತೃ ನನ್ನ ಆತ್ಮೀಯ ಬಂಧು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ. ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದಾರೆ. ನಾನು ಬೆನ್ನುಡಿ ಬರೆದಿದ್ದೇನೆ.‌ ಆಯ್ದ...

‘ನಮ್ಮಮ್ಮ ಅಂದ್ರೆ ನಂಗಿಷ್ಟ’ ತೆಲುಗಿನಲ್ಲಿ

‘ನಮ್ಮಮ್ಮ ಅಂದ್ರೆ ನಂಗಿಷ್ಟ’ ತೆಲುಗಿನಲ್ಲಿ

ವಸುಧೇಂದ್ರ ನನ್ನ ಪ್ರಬಂಧ ಸಂಕಲನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಈಗ ತೆಲುಗಿನಲ್ಲಿ ಪ್ರಕಟವಾಗುತ್ತಿದೆ. ಬಳ್ಳಾರಿಯವಳಾದ ನನ್ನಮ್ಮ, ಯಾವತ್ತೂ ತೆಲುಗು ಪುಸ್ತಕಗಳನ್ನು ಇಷ್ಟ ಪಟ್ಟು ಓದುತ್ತಿದ್ದಳು. ಆ ಕಾರಣದಿಂದಾಗಿ ಇದು ನನಗೆ ಸಂಭ್ರಮದ ಸಂಗತಿಯಾಗಿದೆ. ನನ್ನ ’ಮೋಹನಸ್ವಾಮಿ’ ಕೃತಿಯನ್ನು ತೆಲುಗು ಓದುಗರು ತುಂಬು ಹೃದಯದಿಂದ...

‘ಉರಿ ಚಮ್ಮಾಳಿಗೆ…’ ಎಂಬ ಹೋರಾಟದ ದನಿ

‘ಉರಿ ಚಮ್ಮಾಳಿಗೆ…’ ಎಂಬ ಹೋರಾಟದ ದನಿ

ಪಿ ನಂದಕುಮಾರ್ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಓದು, ಅದಕ್ಕೆ ಪೂರಕವಾದ ಚರ್ಚೆ; ಜೊತೆಗೆ ತಮ್ಮ ಕೃಷಿ ಚಟುವಟಿಕೆಯ ಮೂಲಕ ಆಳುವವರ ದಪ್ಪ ಚರ್ಮಕ್ಕೆ ರೈತರು ಛಾಟಿ ಏಟಿನ ಬರೆಗಳನ್ನು ಹಾಕುತ್ತಿದ್ದಾರೆ. 'ಹೋರಾಟದ...

ಸಂಡೇ ಸ್ಪೆಷಲ್

Sunday Special

ಬೇಲಿಯನು ಜಿಗಿಯುವ ಚಿಟ್ಟೆಯ ಜಾಡು ಕಾಲಗರ್ಭದಲ್ಲಿರುವ ಕರುಣೆಯ ಹಾಡು

ಬೇಲಿಯನು ಜಿಗಿಯುವ ಚಿಟ್ಟೆಯ ಜಾಡು ಕಾಲಗರ್ಭದಲ್ಲಿರುವ ಕರುಣೆಯ ಹಾಡು

ಸುಧಾ ಆಡುಕಳ ಇದ್ದಕ್ಕಿದ್ದಂತೆ ಗೆಳೆಯ ಅಪರಿಚಿತನಾದ ಅವರ ಒಂಟಿತನಕ್ಕೆ ದಾರಿಯೂ ಮರುಗುತ್ತಿದೆ ಹೌದು, ಅನೇಕ ವರ್ಷಗಳವರೆಗೆ ಒಟ್ಟಾಗಿ ನಡೆದವರು, ಇದ್ದಕ್ಕಿದ್ದಂತೆ ಅವರಿಗೆ ನೇರ ಸಂಬಂಧವೇ ಇರದ  ಅದ್ಯಾವುದೋ ವಿಷಯದ ಬಗ್ಗೆ ಮುನಿಸಿಕೊಂಡು, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ವಿಚಿತ್ರವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಭಿನ್ನ ಗುರಿಗಳೆಡೆಗೆ ಗಮಿಸುವವರ ಮಾತು ಬಿಡಿ, ಒಂದೇ ಗುರಿಯೆಡೆಗೆ ಸಾಗುವ ಭಿನ್ನ ದಾರಿಯ ಪಥಿಕರು ಕೂಡ ಒಟ್ಟಿಗೆ ಬೆರೆಯದ, ಪರಸ್ಪರ ಸಂವಾದಿಸಲಾಗದ ಸಂದಿಗ್ಧವನ್ನು ತಂದಿಟ್ಟುಕೊಂಡಿದ್ದೇವೆ. ಅನ್ಯವನ್ನು ಒಳಗೊಳ್ಳುವ ಈ ಮಣ್ಣಿನ ಮೂಲಗುಣ ಇದ್ದಕ್ಕಿದ್ದಂತೆ ಬದಲಾಗಿಹೋಯಿತೆ? ಭೂತಕಾಲದಿಂದ...

ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಶ್ರೀಪಾದ್‌ ಭಟ್‌ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ. ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು...

ಮತ್ತಷ್ಟು ಓದಿ
‘ನಾಟ್ಯ-ಯೋಗ’ ಕಟ್ಟಿಕೊಂಡು

‘ನಾಟ್ಯ-ಯೋಗ’ ಕಟ್ಟಿಕೊಂಡು

ಕಲ್ಲಪ್ಪ ಪೂಜೇರ ಬೆಳಗಾಮ್ ಜಿಲ್ಲೆಯ ರಾಮದುರ್ಗದ ಸಾಲೇಪೂರದವರು. ಬೆಂಗಳೂರು ವಿವಿಯಿಂದ ನಾಟಕದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂ ಪದವಿಗಳನ್ನು...

ಮತ್ತಷ್ಟು ಓದಿ
ಹಣಕ್ಕಿಂತ ಕಲಿಕೆ ಮತ್ತು ಅನುಭವ ದಕ್ಕಿದೆ

ಹಣಕ್ಕಿಂತ ಕಲಿಕೆ ಮತ್ತು ಅನುಭವ ದಕ್ಕಿದೆ

ಮಂಜು ಸಿರಿಗೇರಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪೆ ತಾಲೂಕಿನ ಸಿರಿಗೇರಿ ಗ್ರಾಮದ ಮಂಜು ಸಿರಿಗೇರಿಯವರು ನೀನಾಸಮ್ ಪದವೀಧರರು. ನಾಟಕದಲ್ಲಿ ಸ್ನಾತಕೋತ್ತರ...

ಮತ್ತಷ್ಟು ಓದಿ
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು....

ಮತ್ತಷ್ಟು ಓದಿ
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಪರಮಾತ್ಮನ...

ಮತ್ತಷ್ಟು ಓದಿ
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಎಸ್.ಎಲ್.ಭೈರಪ್ಪ ಶೈಲಿಯಲ್ಲಿ

ವಾನರ ಪರ್ವ ಎಸ್.ಎಲ್.ಭೈರಪ್ಪನವರ ಶೈಲಿಯಲ್ಲಿಅಣಕು ಬರಹ ರಚನೆ : ಬೇಲೂರು ಒಂದು ಊರು. ಅದು ಇತ್ಲಾಗೆ ಬಯಲು ಸೀಮೆಯೂ ಅಲ್ಲ ಅತ್ಲಾಗೆ ಮಲೆನಾಡೂ ಅಲ್ಲ ಅನ್ನುವಂಥದ್ದು. ಆದರೆ ಅಲ್ಲಿ ಸುತ್ತಮುತ್ತ ಮಳೆ ಮಾತ್ರ ತುಂಬಾ ಇರ‍್ತಿತ್ತು. ಆಗಿನ ಕಾಲದಲ್ಲಿ ಎಲ್ಲಾ ಊರಿನಲ್ಲೂ ಇರೋಹಾಗೆ ಆ ಊರಲ್ಲೂ ಒಂದು ಕೆರೆ, ಒಂದು ದೇವರ ಗುಡಿ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ದೇವನೂರು ಮಹಾದೇವ ಅವರ ಶೈಲಿಯಲ್ಲಿ

ಮರ ಹೆತ್ತ ನಗರ (ದೇವನೂರು ಮಹಾದೇವರ ಕ್ಷಮೆ ಕೋರಿ) ದೇವನೂರು ಮಹಾದೇವರ ಶೈಲಿಯಲ್ಲಿಅಣಕು ಬರಹ ರಚನೆ : ಗೌತಮ ಆಕಾಸದಾಗಿನ ಕೋಟಿ ಕೋಟಿ ನಕ್ಸತ್ರಗಳೋಪಾದೀಲಿಬೂಮಿ ಮೇಲಿನ ಈ ರುಕ್ಸಗಳು.ಆ ಕೋಟಿ ಕೋಟಿ ರುಕ್ಸಗಳಾಗೆ ನಮ್ದೂ ಒಂದು ಮರ. ಆಲ್ದ ಮರ.ಅದೂ ಗೋದಾರೀ ತೀರದಲ್ಲೇ.ಸಅಸ್ರಾರು ರೆಂಬೆ ಕೊಂಬೆಗಳ ಚಾಚಿಕೊಂಡುಅತ್ತೆಕರೆಗೆ ಅರಡಿಕೊಂಡಿದ್ದ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಎಚ್ಚೆಸ್ಕೆ ಶೈಲಿಯಲ್ಲಿ

ಗಿಣಿ - ಕಪಿ ಎಚ್ಚೆಸ್ಕೆರವರ ಶೈಲಿಯಲ್ಲಿಅಣಕು ಬರಹ ರಚನೆ : ಆನಂದ ಗೋದಾವರಿ. ಜೀವ ನದಿ.ತೀರದಲ್ಲೊಂದು ಆಲದ ಮರ. ಅದರಲ್ಲಿ ಗಿಳಿಗಳ ವಾಸ.ಚೊಕ್ಕನೆ ಗೂಡು. ಮರಿಗಳ ಕಲರವ. ಎಲ್ಲವೂ ಚೆನ್ನಿತ್ತು. ಗಿಳಿಗಳು ಮರಿಗಳೊಂದಿಗೆ ಸುಖವಾಗಿದ್ದವು.ಕಾರ್ತಿಕ ಮಾಸದ ಒಂದು ದಿನ. ಮಳೆಯೋ ಮಳೆ. ಧಾರಾಕಾರ. ಗಡ ಗಡ ಚಳಿ.ಸುತ್ತಮುತ್ತಲಿದ್ದ ಕಪಿಗಳಿಗೆ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

‘ಅಪರಂಜಿ’ಗೆ ಚಂದಾ ಆಗಲು..

ಅಪರಂಜಿತಿಳಿನಗೆಯ ಕಾರಂಜಿ ಚಂದಾ ವಿವರ:ಬಿಡಿ ಪ್ರತಿ : ರೂ. ೧೦/-ವಾರ್ಷಿಕ ಚಂದಾ :ರೂ. ೧೦೦/-ಹತ್ತು ವರ್ಷದ ಚಂದಾ : ರೂ. ೭೫೦/- ಚಂದಾ ಹಣದ ಚೆಕ್ / ಡ್ರಾಫ್ಟ್ಗಳನ್ನು "ಕೊರವಂಜಿ ಅಪರಂಜಿ ಟ್ರಸ್ಟ್'ಹೆಸರಿಗೆ ನಮೂದಿಸಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ :ಮನಿ ಆರ್ಡರ್ ಸ್ವೀಕರಿಸಲಾಗುವುದಿಲ್ಲ. ಸಂಪರ್ಕ ವಿಳಾಸ: ಶ್ರೀ ಬೇಲೂರು...

ಒಂದು ಜೀವಮಾನಕ್ಕಾಗುವಷ್ಟು ತೇವ  ಎದೆಗಿಳಿಯಿತು

ಒಂದು ಜೀವಮಾನಕ್ಕಾಗುವಷ್ಟು ತೇವ ಎದೆಗಿಳಿಯಿತು

ಉದಯ ಗಾಂವಕಾರ ಕೊರೋನಾ ಕಾಲದ ಟಿಪ್ಪಣಿಗಳು ಲಾಕ್ ಡೌನ್‍ನ ಮೊದಲ ಎರಡು ದಿನಗಳು ಹೇಗೋ ಕಳೆದವು. ಕುಟುಂಬಿಕರೆಲ್ಲ ಬಹಳ ಸಮಯದ ಮೇಲೆ ಒಟ್ಟಿಗೆ ಊಟಮಾಡುತ್ತಿದ್ದಾರೆಂದೂ, ಇಂತದ್ದೊಂದು ಬ್ರೇಕ್ ಅಗತ್ಯವಾಗಿತ್ತೆಂದೂ ಅಲ್ಲಲ್ಲಿ ಮಾತನಾಡಿಕೊಳ್ಳುವುದು ಅಷ್ಟೇನೂ ಅಸಮಂಜಸ ಮತ್ತು ಅಸೂಕ್ಷ್ಮ ಅಂತ ಅನ್ನಿಸುತ್ತಿರಲಿಲ್ಲ. ಮಡಿ-ಮೈಲಿಗೆ...

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ಪ್ರಸಾದ್ ಶೆಣೈ ಆರ್.ಕೆ. ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ ಹಕ್ಕಿಗಳು ಭಾರೀ ಕ್ರೀಯಾಶೀಲತೆಯಿಂದ ಸರ್ಕಸ್ಸು ಮಾಡೋದನ್ನೂ, ಸ್ಟ್ರಾ ನಂತಹ ತನ್ನ ಕೊಕ್ಕನ್ನು ಹೂವಿನ ದೇಹದೊಳಗೆ ಇಳಿಸಿ ಸುರ್ ಎಂದು ಹೀರಿ, ಮತ್ತೆ ಇನ್ನೊಂದು...

Jugari Cross

‘ಪುಸ್ತಕಮನೆ ಹರಿಹರಪ್ರಿಯ’ ಪ್ರಶ್ನೆ ಎತ್ತಿದ್ದಾರೆ..

‘ಪುಸ್ತಕಮನೆ ಹರಿಹರಪ್ರಿಯ’ ಪ್ರಶ್ನೆ ಎತ್ತಿದ್ದಾರೆ..

ಹರಿಹರಪ್ರಿಯ 'ಕಳೆದ 50 ವರುಷಗಳಿಂದ ಕುವೆಂಪು ವ್ಯಕ್ತಿತ್ವ, ವಿಚಾರ, ಹೋರಾಟ, ಬರವಣಿಗೆಗಳಿಂದ ಪ್ರಭಾವಿತನಾಗಿಯು, ಪ್ರಚೋದಿತನಾಗಿಯು ಬೆಳೆದುಬಂದವನು ನಾನು. ಕುವೆಂಪು ಹೆಸರಿನ ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡವನು ನಾನು. ಆದರೆ, ಇದೀಗ ಕನ್ನಡ ವಿಶ್ವವಿದ್ಯಾಲಯ, ಹಂಪಿಯವರು ಪ್ರಕಟಿಸಿರುವ 12 ಸಂಪುಟಗಳನ್ನೂ ತಂದು ನೋಡಿದ ಮೇಲೆ, ಇನ್ನು ಮೇಲೆ ಕುವೆಂಪು ಬಗ್ಗೆ ಬಾಯಿಬಿಡುವುದೇ ಮೂರ್ಖತನ ಎಂಬ ನಿಲುವಿಗೆ ಬಂದಿದ್ದೇನೆ. ಏಕೆಂದರೇ, 2013 ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿಯವರು ಹೊರತಂದ ಸಮಗ್ರ ಸಂಪುಟಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡೆ. ಇದೀಗ ಪ್ರೊ.ಡಾ.ಕೆ.ಸಿ.ಶಿವಾರೆಡ್ಡಿಯವರ ನಾಮಾಂಕಿತದಲ್ಲಿ ಹೊರಬಂದಿರುವ. ಹೆಗ್ಗಡತಿ, ಮದುಮಗಳು, ರಾಮಾಯಣ ದರ್ಶನಂ… ಇತ್ಯಾದಿ ತಂದು ಮನೆಯಲ್ಲಿ ಜಾಗವೇ ಇಲ್ಲದಂತೆ ಆಗಿದೆ....

ಮತ್ತಷ್ಟು ಓದಿ

ಜಾಹೀರಾತು

Feather Design
ಅಕ್ಷರ ಕಳ್ಳರಿದ್ದಾರೆ ಎಚ್ಚರ…

ಅಕ್ಷರ ಕಳ್ಳರಿದ್ದಾರೆ ಎಚ್ಚರ…

ಇತ್ತೀಚೆಗೆ ಕೃತಿಚೌರ್ಯಗಳಂತಹ ಘಟನೆಗಳು ನಡೆಯುತ್ತಲೇ ಇವೆ. ವಾಟ್ಸಾಪ್‌ , ಫೇಸ್‌ ಬುಕ್‌ ನಲ್ಲಂತೂ ಯಾವೂದೇ ಭಯವಿಲ್ಲದೇ ರಾಜಾರೋಷವಾಗಿ ಕೃತಿಚೌರ್ಯಗಳು ಹೆಚ್ಚಾಗಿ ನಡೆಯುತ್ತಿವೆ....

ಬ್ಯಾರಿ ಅಕಾಡೆಮಿ ಗೋಳಿಗೆ ಹನೀಫ್ ಉತ್ತರ

ಬ್ಯಾರಿ ಅಕಾಡೆಮಿ ಗೋಳಿಗೆ ಹನೀಫ್ ಉತ್ತರ

ಬ್ಯಾರಿ ಲಿಪಿಗೆ ಸಂಬಂಧಿಸಿ ನಾನು ಕೇಳಿದ ಹತ್ತು ಪ್ರಶ್ನೆಗಳಿಗೆ ಹಿರಿಯ ಪತ್ರಕರ್ತರು, ಕನ್ನಡದ ಕತೆಗಾರರು, ಬ್ಯಾರಿ ಸಾಹಿತ್ಯ ಸಂಸ್ಕೃತಿಗೆ ಅಪಾರ ಕೆಲಸ ಮಾಡಿದ ಬಿ.ಎಂ. ಹನೀಫ್...

ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು ….

ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು ….

ಬಷೀರ್‌ ಬಿ ಎಂ ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು .... 1. ಬ್ಯಾರಿ ಲಿಪಿ ಸಂಶೋಧನೆಯೇ ? ಸೃಷ್ಟಿಯೇ ? 2. ಬ್ಯಾರಿ ಲಿಪಿ ಸೃಷ್ಟಿಸಿದಾತ ಬ್ಯಾರಿಯೆ ? ಆತನಿಗೆ ಬ್ಯಾರಿ ಭಾಷೆಯ...

ʼಭೂಮಿಗೀತʼ ಯಾವುದೋ ಒಂದು ಚಿತ್ರವಲ್ಲ

ʼಭೂಮಿಗೀತʼ ಯಾವುದೋ ಒಂದು ಚಿತ್ರವಲ್ಲ

ಕೇಸರಿ ಹರವೂ ಸಿದ್ದರಾಜ ಕಲ್ಯಾಣಕರ ಸ್ಮರಣೆಯ ಬಗ್ಗೆ ಬರೆಯುವಾಗ 'ಭೂಮಿಗೀತ' ಚಿತ್ರದಲ್ಲಿ ನಟಿಸಿದ ಅಂಶ ಪ್ರಸ್ತಾಪವೇ ಆಗಿಲ್ಲ! ನಾನು ಇಲ್ಲಿ ಖಂಡಿತಾ ಇದು ನನ್ನ ಚಿತ್ರ ಎನ್ನುವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest