TIMEPASS ಕಡ್ಲೆ ಕಾಯಿ!!!

ಶೇ-ಪು ಅವರು ತಮ್ಮ ಬ್ಲಾಗ್ ಗೆ ಬಂದವರಿಗೆ ಹೀಗೆ ಹೇಳುತ್ತಾರೆ- ‘ಏನ್ರೀ? ಕೆಲ್ಸ ಇಲ್ವಾ?? ಇಲ್ಲಿವರೆಗೂ ಬಂದಿದೀರ ಅಂದ್ ಮೇಲೆ ಹಾಗೇ ಕಾಣಿಸ್ತಾ ಇದೆ! ಹೋಗ್ಲಿ, ಬಂದಿದ್ದು ಅಯಿತು, ಸ್ವಲ್ಪ ಕಡ್ಲೆ ಕಾಯಿ ತಿಂದು ಹೋಗಿ’. ಯಾಕಂದ್ರೆ ಅವರ ಬ್ಲಾಗ್ ನ ಹೆಸರೇ ‘TIMEPASS ಕಡ್ಲೆ ಕಾಯಿ!!!’
ಹೀಗೆ ಬ್ಲಾಗ್ ಸಂಚಾರ ಕೈಗೊಂಡಿದ್ದಾಗ ಅವರ ಒಂದು ಬರಹ- ಅಟ್ಟವೆಂಬ ಭಂಡಾರ! ಕಣ್ಣಿಗೆ ಬಿತ್ತು. ಮನೆಯಲ್ಲಿ ಅಟ್ಟ ಇದ್ದವರಿಗೆಲ್ಲಾ ಈ ಬರಹ ಕಾಡಿಸದೇ ಇರುವುದಿಲ್ಲ. ಓದಿ- 

asd1

ಅಟ್ಟವೆಂಬ ಭಂಡಾರ!

ನೆನ್ನೆ ನಮ್ಮ ಮನೆಯ ಅಟ್ಟವನ್ನು ಸ್ವಚ್ಛಗೊಳಿಸೋಣವೆಂದು ನಾವು ಅಲ್ಲಿರುವ ವಸ್ತುಗಳನ್ನೆಲ್ಲ ಇಳಿಸಿದೆವು…
ನಮ್ಮ ಅಟ್ಟದಲ್ಲಿರುವ ವಸ್ತುಗಳು, ನನ್ನ ಚಿಕ್ಕಂದಿನ ದಿನಗಳ ನೆನಪುಗಳನ್ನು ತಂದುಕೊಟ್ಟಿತು…   
ಸಿಕ್ಕ ವಸ್ತುಗಳ ಪಟ್ಟಿ:
– ಕೂಡಿಸಿಟ್ಟ ಸುಮಾರು ೫೦೦ ರೀತಿಯ ನಾಣ್ಯಗಳು ಹಾಗೂ ನೋಟುಗಳು
– ವಿವಿಧ ತರಹದ ಬೆಂಕಿ ಪೊಟ್ಟಣಗಳು…
– ವಿವಿಧ ದೇಶದ ಅಂಚೆ ಚೀಟಿಗಳು
– ನಾನು ಚಿಕ್ಕಂದಿನಲ್ಲಿ ಬಿಡಿಸಿದ ಚಿತ್ರಗಳು, ಪೈಂಟಿಂಗ್‍ಗಳು
– ನಾನು ಆರನೇ ಕ್ಲಾಸಿನಲ್ಲಿ ಬರೆದ ಉತ್ತರ ಭಾರತದ ಪ್ರವಾಸ ಕಥನ
– ನಾನು-ನನ್ನ ಅಕ್ಕ, ಪಕ್ಕದ ಮನೆಯ ಮಕ್ಕಳು ಒಟ್ಟಿಗೆ ಆಡಿದಾಗ ಬರೆದ ಆಟದ ಬರಹಗಳು
– ಹಾವು-ಏಣಿ ಆಟದ ಬೊರ್ಡ್
– ಪಗಡೆ ಕಾಯಿಗಳು
– ಕವಡೆಗಳು, ಕಪ್ಪೆ ಚಿಪ್ಪುಗಳು
– ನನ್ನ ಅಕ್ಕನು ಅಂಟಿಸಿ ತಯಾರಿಸಿದ ‘A for apple’ ನಿಂದ ‘z for zebra’ ಎಂಬ ಪುಸ್ತಕ
– ಹುಟ್ಟು ಹಬ್ಬಕ್ಕೆ ಗೆಳೆಯರು ಕೊಟ್ಟ ಶುಭಾಶಯ ಪತ್ರಗಳು (ಗ್ರೀಟಿಂಗ್ ಕಾರ್ಡ್)
– ಲಿಟಲ್ ಜೈಂಟ್ಸ್ ಎಂಬ ಮ್ಯಾಗಝೀನ್ ನವರು ನಡೆಸಿದ್ದ ಬಣ್ಣ ಹಾಕುವ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ಕೊಟ್ಟ ಪ್ರಮಾಣ ಪತ್ರ
– ನಾನು ಬಟ್ಟೆಯ ಮೇಲೆ ಮಾಡಿದ ಚಿತ್ತಾರಗಳು, ಕೈ-ಕೆಲಸಗಳು
– ನ್ಯೂಸ್ ಪೇಪರ್ ನಲ್ಲಿ ಬರುತ್ತಿದ್ದ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಕತ್ತರಿಸಿ ಶೇಖರಿಸಿದ್ದ ಒಂದು ಫೈಲ್
– ‘ಬಿಗ್ ಫನ್’ ಬಬ್ಬಲ್ ಗಮ್ಮಿನ ಒಳಗೆ ಸಿಗುತ್ತಿದ್ದ ಕ್ರಿಕೆಟ್ ಪಟುಗಳ ಚಿತ್ರಗಳು
(ನನಗೆ ಬಬ್ಬಲ್ ಗಮ್ ಕೊಡಿಸುತ್ತಿಲ್ಲವಾದರೂ, ಆಗ ಗೆಳೆಯರನ್ನು ಕಾಡಿ ಬೇಡಿ ಶೇಖರಿಸುತ್ತಿದ್ದೆ!)
– ನನ್ನ, ಅಕ್ಕನ ಸ್ಕೂಲಿನ ಮಾರ್ಕ್ಸ್ ಕಾರ್ಡ್-ಗಳು
– ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಹಾಲ್‍ಟಿಕೆಟ್‍ಗಳು
– ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಬರೆದಿದ್ದ ‘ಉಕ್ತಲೇಖನ’ದ ಪದಗಳ ಪಟ್ಟಿ
– ನನಗೆ ಬಹುಮಾನವಾಗಿ ಸಿಕ್ಕ ಹಲವು ಪುಸ್ತಕಗಳು
– ನನ್ನ ಚಿಕ್ಕಪ್ಪ ತಂದು ಕೊಟ್ಟ ರಷ್ಯನ್ ಜಾನಪದ ಕಥೆ ಪುಸ್ತಕಗಳು
– ಬೊಂಬೆ ಮನೆ, ಚಂದಮಾಮ ಪುಸ್ತಕಗಳು
– ನಾನು ಮತ್ತು ಅಕ್ಕ ಕೂಡಿ ಹಾಕುತ್ತಿದ್ದ ‘ಸ್ಟಿಕರ್’ ಗಳು…
– ಹಳೆಯ ಪುಸ್ತಕದಲ್ಲಿ ಇಟ್ಟ ಗಿಣಿಯ ಪುಕ್ಕ
– ನವಿಲುಗರಿ
– ಸ್ಕೂಲಿಗೆ ಕೊಂಡೊಯ್ಯುತ್ತಿದ್ದ ಅಲ್ಯೂಮಿನಿಯಂ ಸೂಟ್ ಕೇಸ್
– ಸಂಗೀತದ ಪುಸ್ತಕ
– ಇಂಜಿನೀರಿಂಗ್‍ನಲ್ಲಿ ಕ್ಲಾಸ್‍ಮೇಟ್‍ಗಳು ಅಂಗಿಯ ಮೇಲೆ ಬರೆದ ಹಸ್ತಾಕ್ಷರಗಳು
– ಇಂಟರ್‍ನೆಟ್ ಮಿತ್ರರು ಬರೆದ ಪತ್ರಗಳು
ಹೀಗೆ ಎನೇನೋ…
ಇವೆಲ್ಲ ಕೂತು ನೆನ್ನೆ ನೋಡುತ್ತಿದ್ದಾಗ ಮನದಲ್ಲಿ ಹಾದು ಹೋದ ಸುಂದರ ನೆನಪುಗಳ ಎಣಿಕೆ ಎಷ್ಟೋ!
ಈಗ ಮತ್ತೆ ಅಟ್ಟಕ್ಕೆ ಇವೆಲ್ಲವನ್ನೂ ಇಡಬೇಕು…ಮತ್ತೆ ಎಷ್ಟು ವರ್ಷಗಳಾದ ಮೇಲೆ ಇದನ್ನೆಲ್ಲ ತೆಗೆಯುವೆನೋ ತಿಳಿಯದು…
ಎಷ್ಟು ಕಸ ಕೂಡಿ ಹಾಕುವೆನೆಂದು ಅಮ್ಮ ಮತ್ತು ಅಕ್ಕನ ಹತ್ತಿರ ಬಯ್ಸಿಕೊಂಡರೂ ಸರಿಯೇ ನನಗೆ ಇವೆಲ್ಲ ಬೇಕು…ಮತ್ತೆ ಇಂದು ಅಟ್ಟ ಸೇರಲಿವೆ…
ಕೆಲವು ಬೊಂಬೆಮನೆ , ಚಂದಮಾಮ ಪುಸ್ತಕಗಳನ್ನು ಕೆಳಗೆ ಇಟ್ಟುಕೊಂಡಿರುವೆ ಓದಲಿಕ್ಕೆ ಅಂತಾ… Smiling
ನೀವು ಹೀಗೆ ‘ಕಸ’ ಕೂಡಿ ಹಾಕ್ತೀರಾ?

‍ಲೇಖಕರು avadhi

December 29, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

  1. siddamukhi

    ಮಂದಣ್ಣನ ಜೇಬು ಈ ಹಟ್ಟ
    – ಸಿದ್ದಮುಖಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: