u can try…

ಸುನಿಲ್ ಹೊಸಕೋಟೆ

ಈ ಮನಸ್ಸು ಹೀಗೆ ಒಂಥರಾ ತಿಕ್ಕಲು,ಧಿಡೀರ್ ಅಂತ ಕೋಪ ಹೊರಹಾಕಿಬಿಡತ್ತೆ…ಇನ್ನೊಮ್ಮೆ ನಗುವನ್ನು,ಮತ್ತೊಮ್ಮೆ ಕಾರಣ ರಹಿತ ಮೌನ.ಕೆಲವೊಮ್ಮೆ ಆಲೋಚನೆಗಳು ಎಷ್ಟು ಸ್ತಭ್ಧವಾಗಿಬಿಡುತ್ತದೆ ಅಂದ್ರೆ ಕಾರಣಗಳೇ ಇಲ್ಲದೆ ಡಲ್ ಆಗಿಬಿಡುತ್ತೇವೆ,ಒಬ್ಬೊಂಟಿ ಅನಿಸುತ್ತೇವೆ,ಕೂತು ಅತ್ತುಬಿಡೋಣ ಅನ್ನಿಸುತ್ತದೆ, ಅತ್ತರೆ ಯಾರಾದ್ರು ನೋಡಿಬಿಟ್ಟಾರು ಅಂತ ಬಂದು ಕೋಣೆಯ ಬಾಗಿಲು ಹಾಕಿಕೊಂಡು ಮನಸ್ಸು ಅಳಲು ತಯಾರಿ ಮಾಡಿಕೊಂಡಾಗ,ಮತ್ತಿನ್ಯಾವುದೋ ನೆನಪು ಬಂದು ಅಳು ಕೂಡ ಮರೆತು ನಿಂತುಬಿಡುತ್ತದೆ,ಅಪ್ಪ ಸುಮ್ಮನೆ ನೆನಪಾಗ್ತಾನೆ,ಆಗ ಯಾವಾಗಲೋ ಆದ ಅವಮಾನಗಳು,ಇಂಚು ಇಂಚು ಅನುಭವಿಸಿದ ನೋವು,ಗೆದ್ದು ನಿಲ್ಲೋದು ಯಾವಾಗ??ಫಿನಿಕ್ಸ್ ಥರ??ಅವಮಾನ ಮಾಡಿದೋರಿಗೆ ಒಂದು ದೊಡ್ಡ ಪಾಠ ಹೇಳುವ ಸಮಯ ಬರೋದು ಯಾವಾಗ ಎಂದು ಅದದೇ ನೆನಪು ಕಾಡಿ ಕಣ್ಣಂಚಲಿ ನೀರು ಬರೆಲೇಬೇಕು ಇನ್ನೇನು ಅನ್ನುವಷ್ಟರಲ್ಲಿ,ಅವಳ್ಯಾರೋ ಗೆಳತಿ ಹಾದು ಹೋದಾಗ ಅನುಭವಿಸಿದ ತಂಪು ಮೂಗಿಗೆ ಘಂ ಎನಿಸುತ್ತದೆ,ಹಾಗೆ ಅಲ್ಲವ??ಈ ಮನಸ್ಸನ್ನು ಒಂದು ಪಿಕ್ಚರ್ ಮಾಡಿ ಕೂರಿಸೋದಕ್ಕೆ ಸಾಧ್ಯವೇ ಆಗೋಲ್ಲ…ಎಷ್ಟೋ ಬಾರಿ ಇದಕ್ಕೆಲ್ಲ ಒಂದು frame ಹಾಕಿ ಮುಗಿಸಿಬಿಡೋಣ ಅನ್ನಿಸಿದಾಗ..ಆಮೇಲೆ ಛೇ!! ಇದು ಪೂರ್ವಾಗ್ರಹ..ಇದ್ದಂತೆ ಇದ್ದುಕೊಳ್ಳಲಿ ಬಿಡಿ ಅನಿಸಿ ಸುಮ್ಮನಾಗ್ತೀವಿ.

ಖುಷಿಯಲ್ಲಿ ಇದ್ದಾಗ ಮನಸ್ಸು ವಿಸ್ತಾರ ಅನ್ನಿಸತ್ತೆ,ಆದರೆ ಸಮಯ ಕಮ್ಮಿಯಾಗಿ ಬಿಡುತ್ತದೆ….ಈ ಖುಷಿಯ ಅವಧಿ ಕಡಿಮೆ ಆಗುತ್ತೇನೋ ಅನ್ನುವ ಕಲ್ಪನೆ.ನೋವು ಹೊತ್ತು ಕೂತಾಗ ಮನಸ್ಸು ತುಂಬಾ ಚಿಕ್ಕದಾಗಿ…ಅನುಭವಿಸುವ ಸಮಯ ತುಂಬಾ ಹೆಚ್ಚಿದೆ ಅನಿಸುತ್ತದೆ.ಅಂತಹ ಅವಧಿಯನ್ನು ನೋವಿನಲ್ಲಿದ್ದಾಗ ಕಡಿಮೆ ಮಾಡಿಕೊಳ್ಳಲು ಕುಡಿತ ಶುರುವಾಗತ್ತೆ,ನಿದ್ದೆ ಮಾಡಿಬಿಟ್ರೆ ನೋವು ಮರೆಯಬಹುದು ಅನ್ಸತ್ತೆ,ಯಾರಲ್ಲಿಯೋ ಹಂಚಿಕೊಂಡರೆ ಮನಸ್ಸು ತಿಳಿ ಆಗಬಹುದು ಎಂಬ ಕಲ್ಪನೆ ಕೂಡ ಸಹಾಯಕ್ಕೆ ಬರುತ್ತದೆ,ಅಯ್ಯೋ ನಾನು ಮನಸಿನ ಆಳಗಳಲ್ಲಿ ಇರುವ ನೋವು,ಕೆಲವೊಮ್ಮೆ ನಾನೇ ಮಾಡಿದ ತಪ್ಪುಗಳು,ಸೋತು ಇನ್ನೊಬ್ಬರಿಗೆ ನಮ್ಮನ್ನೇ ಅರ್ಪಿಸಿದ ಕ್ಷಣಗಳು ಇನ್ಯಾರಲ್ಲೂ ಹಂಚಿಕೊಂಡರೆ ನಮಗೆ ಅವಮಾನ,ಮುಂದೆ ಜನ ಅದರ ಉಪಯೋಗ ಪಡೆದುಕೊಳ್ಳುತ್ತಾರೆ,ಅನ್ನುವ ಇನ್ನೊಂದು ಗಾಢ ಆಲೋಚನೆ…ಮನಸ್ಸು ಹೊರಹಾಕಬೇಕಾದ ತಳಮಳಗಳನ್ನ ಒಟ್ಟಿಗೆ ಅದುಮಿಟ್ಟುಕೊಳ್ಳತ್ತೆ .ಅದುಮಿಟ್ಟುಕೊಂಡ ಆ ವಸ್ತು ಒಮ್ಮೆ ಖಂಡಿತ ಜೋರಾಗಿ ಸದ್ದು ಮಾಡುತ್ತದೆ ಅನ್ನು ಕಲ್ಪನೆ ಕೂಡ ನಮಗೆ ಇರುತ್ತದೆ…ಆದರು ಹೇಳಿಕೊಳ್ಳುವ ಮನಸ್ಸು ಆಗೋದಿಲ್ಲ.ಹೀಗೆ ಮನಸ್ಸಿನ space ಪೂರ್ತಿ ಒಂದಿಲ್ಲೊಂದು ವಿಚಾರ,ನಮ್ಮದೇ ತರ್ಕ ಹಾಗು ನಿಲುವುಗಳು ಆವರಿಸಿಕೊಂಡು ಬಿಟ್ಟಾಗ …ಮೇಲಿನ ಎಲ್ಲ ಚಾಂಚಲ್ಯವೂ ನಮ್ಮನ್ನೇ ಹಿಂಬಾಲಿಸುತ್ತೆ…ಕೆಲವೊಮ್ಮೆ ಬಿಟ್ಟೂ ಹೋಗೋದಿಲ್ಲ…   ಮನಸ್ಸಿನ್ನ ಸಮಸ್ಯೆಗಳು ಎಲ್ಲರಿಗೂ ಕಾಡಿದರು ಅದರ ಸ್ವರೂಪ,ಆಳ ಹಾಗು ವಿಕೃತಗಳು ಒಬ್ಬೊಬ್ಬರದ್ದು ಒಂದೊಂದಾಗಿರುತ್ತೆ,ತೀರ ಜಡತ್ವದ ಮನ್ನಸ್ಸಿನವನಾದ ನಾನು…ಅದೆಷ್ಟು ಮೊಂಡು ಸ್ವಭಾವ ಅಂದ್ರೆ ಇಂತಹ ಆಲೋಚನೆ ಕಾಡುವಾಗಲೇ…ಒಂದಷ್ಟು ಹೊತ್ತು ಗೋಳನ್ನು ಅನುಭವಿಸಿ ಕೆಲ ಹೊತ್ತು ಮೌನಕ್ಕೆ ಶರಣಾಗುತ್ತೇನೆ,ಒಳಗೆ ನಡಿಯುತ್ತಿರುವ ಒಂದೊಂದು ಗೊಂದಲಗಳನ್ನು ನೋಡಿಕೊಳ್ಳುತ್ತಾ ಹೋಗುತ್ತೇನೆ,ಅದು ಯಾಕೆ ಕಾಡ್ತಾ ಇದೆ ಅನ್ನೋದು ಗಮನಿಸ್ತೇನೆ,ನನ್ನ ಒಂದು ಭಾರಿ ನಿಲುವು ಅಂದರೆ,ನೋವು ಹಾಗು ತುಡಿತಗಳು ನಾವಾಗೇ ಸೃಷ್ಟಿ ಮಾಡಿಕೊಂಡಿದ್ದರಿಂದ ಅದನ್ನು ಪರಿಹರಿಸಿಕೊಳ್ಳುವ ಪಾಲುದಾರರು ನಾವೇ ಆಗಿರುತ್ತೆವಾದ್ದರಿಂದ…ಸಮಸ್ಯೆ ಅನಿಸಿದ್ದಕ್ಕೆ ಪರಿಹಾರವೂ ನಾವೇ ಕಂಡುಕೊಳ್ಳಬೇಕು ಎಂಬ ಹಠ…ನೋವು ಗಮನಿಸುತ್ತಾ ಹೋದಷ್ಟು ಕಮ್ಮಿ ಆಗುತ್ತದೆ ಅನ್ನೋದು ನನ್ನ ಅಲ್ಪನೆ..ಅದು ನಿಜವೂ ಆಗಿದೆ.ನನ್ನ ಸಾಮಾನ್ಯ ನೋವುಗಳನ್ನು ನಾನು ಇದುವರೆಗೂ ಯಾರಲ್ಲಿಯೂ ಹಂಚಿಕೊಂಡಿಲ್ಲ,ಹಂಚಿಕೊಳ್ಳದೆ ಇದ್ದರೆ ಹಗುರವಾಗೋಲ್ಲ ಅನ್ನುವ ಯಾವ ನೋವುಗಳು ನನ್ನ ಕಾಡಿಲ್ಲ…ಇಂತಹ ಸಮಯಗಳಲ್ಲಿ ನನ್ನೊಂದಿಗೆ ನಾನು ಕಳೆಯಲು ಪ್ರಯತ್ನಿಸುತ್ತೇನೆ,ಮೊಬೈಲ್ ನೆಟ್ವರ್ಕ್ ಕೂಡ ಇಲ್ಲದ ಜಾಗಕ್ಕೆ ಹೋಗಿ ಒಂದಷ್ಟು ದಿನ ಸವೆದು ಬರುತ್ತೇನೆ,ನನ್ನೊಂದಿಗೆ ಒಂದಷ್ಟು ಹಳೆಯ ಮುದ ನೀಡುವ ಹಾಡುಗಳು,ಗಜಲ್ ಗಳು ,ಇಷ್ಟದ ಒಂದಷ್ಟು ಪುಸ್ತಕಗಳು…ಹೊತ್ತು ಹೊರಟರೆ ನಾನೊಬ್ಬ ಅಲೆಮಾರಿ…ಒಮ್ಮೊಮ್ಮೆ ಎಲ್ಲಿ ಹೊರಡುತ್ತೇನೆ ಅನ್ನೋದು ಗೊತ್ತಿರೋಲ್ಲ…ದಾರಿಯಲ್ಲಿ ನಿರ್ಧರಿಸಿ ಹೊರಡುವೆ…   ಅಂದುಕೊಂಡ ಸ್ಥಳ ತಲುಪಿದ ಮೇಲೆ ನನ್ನ ಆಂತರ್ಯ ಹೊಕ್ಕುವ ಕಾರ್ಯಾಗಾರ ಶುರು…ಪ್ರತಿಯೊಂದು ಗಮನಿಸುತ್ತ ಹೋದಂತೆ….ಒಂದು ಬಾರಿ ಹೇಗನಿಸುತ್ತದೆ ಅಂದರೆ..ನನ್ನೊಂದಿಗೆ ನಾನು ಮಾತ್ರ ಇರುತ್ತೇನೆ…ಒಂದೇ ಒಂದು ಆಲೋಚನೆ…not even a single thought can touch me ..ಅದೆಲ್ಲ ಮುಗಿಸಿಕೊಂಡು…you are ok ಸುನಿಲ್ ಅಂತ ನನ್ನ ಮನಸ್ಸು ನನಗೆ ಒಂದು discharge ಶೀಟ್ ಕೊಡುತ್ತೆ….ಮನೆಯ ಕಡೆ ಹೆಜ್ಜೆ ಹಾಕುತ್ತೇನೆ…ಮತ್ತೆ ಅಂತಹ ಯಾತನೆ ಕಾಡೋದು ತುಂಬಾ ವಿರಳ…. ನೀವು ಹೀಗೆ ಟ್ರೈ ಮಾಡಬಹುದು…ಮನಸ್ಸು ವಿಹ್ವಲವಾದಾಗ…ಇಂತಹದ್ದೊಂದು ಮೊಂಡುತನ ಸೃಷ್ಟಿ ಮಾಡಿಕೊಳ್ಳಿ,ದೂದ್ದದೊಂದು ಸಾಗರದಲ್ಲಿ,ನೀವೊಬ್ಬರೇ ಒಂದು ತೆಪ್ಪದಲ್ಲಿ ಕೂತು ಚಲಿಸುವಾಗ,ಸಾಗರದ ಅಷ್ಟೂ ವಿಸ್ತಾರವನ್ನು ನೋಡಿ,ಅಷ್ಟು ಮಹಾನ್ ಸಾಗರಕ್ಕೆ ಬರೀ ಈ ತೆಪ್ಪದಲ್ಲಿ ಹೊರಡುವ ನಾವು ಏನೆಲ್ಲಾ ಪ್ರಯಾಸ,ಸಿದ್ಧತೆ,ಜೀವನದೊಂದಿಗಿನ ಜಿಗುಪ್ಸೆ ಹಾಗು ಅದಕ್ಕೆ ಹೊಂದಿಕೊಂಡಂತೆ ಪುಟಿಯುವ ಪ್ರೀತಿ ಎಲ್ಲ ಮಿಶ್ರಣ ಸೇರಿ…ನಾವೇ ತೆಪ್ಪ ನಡೆಸಿ…ದಡ ಸೇರುವ ಕಾಯ ಮಾಡಿಕೊಳ್ಳೋದು ಹೇಗೆ ಒಂದು ಯೋಜನೆಯೋ..ಆ ಥರ ಜೀವನವು ಒಂದು ದೊಡ್ಡ ಸಾಗರ…ಎಂದು ಕಲ್ಪಿಸಿಕೊಂಡು ಪ್ರಯಾಣ ಹೊರಟರೆ…ಅದೊಂದು ಸುಂದರ ಅನುಭವ…ಪ್ರಾಯಣದ ಮಧ್ಯೆ ಕೊಟ್ಟ ಪ್ರತಿಯೊಂದು ನೋವು ಹಾಗು ಸಂತೋಷವೇ ಅನುಭವ….ಅದು ನಮ್ಮನ್ನು ಗಟ್ಟಿ ಮಾಡಿದಷ್ಟು ಬೇರೆ ಯಾವುದು ಮಾಡಲು ಸಾಧ್ಯವಿಲ್ಲ… u can try…  ]]>

‍ಲೇಖಕರು G

April 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

14 ಪ್ರತಿಕ್ರಿಯೆಗಳು

 1. sandhya

  ಎಲ್ಲರ ನಡುವೆ ತರಲೆ ಮಾಡುತ್ತಾ, ಭಾರತಿಯನ್ನು, ಪೂರ್ಣಿಮಾಳನ್ನೂ ರೇಗಿಸುತ್ತಾ, ಮಾತಿನ ನಡುವೆಯೇ ’ಅಕ್ಕ, ಇವತ್ತೇನಾಯ್ತು ಗೊತ್ತಾ’ ಅ೦ತ ಅದುವರೆಗು ನಾವು ಮಾತಾಡುತ್ತಿದ್ದ ವಿಷಯಕ್ಕೆ ಒ೦ದಿಷ್ಟೂ ಸ೦ಬ೦ಧವಿಲ್ಲದ ಯಾವುದೋ ಒ೦ದು ಹೊಸ ಅ೦ತರಿಕ್ಷಕ್ಕೆ ಜಿಗಿದು ಬಿಡುವ ಹುಡುಗನ ಮನಸ್ಸಿನಲ್ಲಿ ಹೀಗೊ೦ದು ತೆಪ್ಪ ಚಲಿಸುತ್ತಿರಬಹುದು ಅ೦ತ ಯಾರಿಗೆ ಗೊತ್ತಿತ್ತು?! ಒಳ್ಳೆ ಲೇಖನ ಸುನಿಲ್, ಮಾತು ಮೌನವಾದಾಗಲೇ ಒ೦ದು ಹಾದು ಎದೆಯಲ್ಲಿ ಹುಟ್ಟುತ್ತದೆ ಅ೦ತಾರೆ, ಹೀಗೆ ನಿನ್ನ ಮನದಲ್ಲಿ ಮಾತಾಗದ ಭಾವನೆಗಳು ಹಾಡಾಗುತ್ತಾ ಹೋಗಲಿ.

  ಪ್ರತಿಕ್ರಿಯೆ
 2. Prakash Srinivas

  ತುಂಬಾ ಚೆನ್ನಾಗಿದೆ ಸುನಿಲ್ ಮನಸಿನೊಳಗಿನ ಭಾವನೆಗಳನ್ನು ಚೆನ್ನಾಗಿ ಬರೆದಿದ್ದೀಯ !

  ಪ್ರತಿಕ್ರಿಯೆ
 3. Badarinath Palavalli

  ದುಖದ ಸರಸ್ಸಾಗರದಲ್ಲಿ ಸದಾ ಮೀಯುತಿರುವ ನಮ್ಮಂತಹ ಬಡಪಾಯಿಗಳಿಗೆ ಒಳ್ಳೆಯ ಸಾಂತ್ವನದಂತದಹ ಬರಹ ಬರೆದುಕೊಟ್ಟಿದ್ದೀರಿ.
  ಮನೋ ವಾಂಛೆಯು ನೆರವೇರದಿದ್ದಾಗ ಅಥವಾ ವಿನಾಕಾರಣ ನಾವು ಮಾಡದ ತಪ್ಪಿಗೆ ಶಿಕ್ಷೆಗೆ ಗುರಿಯಾದಾಗ ಖಿನ್ನಗೊಳ್ಳುವ ಮನಸ್ಸು, ಅದರಿಂದಲೇ ಪಾಠ ಕಲಿಯ ಬೇಕೆನ್ನುವ ನಿಮ್ಮ ಮಾತು ನಿಜ.
  ಒಳ್ಳೆಯ ಬರಹಗಾರ ಮನೋ ವಿಕಸನಗೊಳಿಸುತ್ತಾನೆ. ನಿಮಗೆ ಆ ಎಲ್ಲಾ ಲಕ್ಷಣಗಳಿವೆ.

  ಪ್ರತಿಕ್ರಿಯೆ
 4. badarinath palavalli

  ದುಖದ ಸರಸ್ಸಾಗರದಲ್ಲಿ ಸದಾ ಮೀಯುತಿರುವ ನಮ್ಮಂತಹ ಬಡಪಾಯಿಗಳಿಗೆ ಒಳ್ಳೆಯ ಸಾಂತ್ವನದಂತದಹ ಬರಹ ಬರೆದುಕೊಟ್ಟಿದ್ದೀರಿ.
  ಮನೋ ವಾಂಛೆಯು ನೆರವೇರದಿದ್ದಾಗ ಅಥವಾ ವಿನಾಕಾರಣ ನಾವು ಮಾಡದ ತಪ್ಪಿಗೆ ಶಿಕ್ಷೆಗೆ ಗುರಿಯಾದಾಗ ಖಿನ್ನಗೊಳ್ಳುವ ಮನಸ್ಸು, ಅದರಿಂದಲೇ ಪಾಠ ಕಲಿಯ ಬೇಕೆನ್ನುವನಿಮ್ಮ ಮಾತು ನಿಜ.
  ಒಳ್ಳೆಯ ಬರಹಗಾರ ಮನೋ ವಿಕಸನಗೊಳಿಸುತ್ತಾ ನೆ. ನಿಮಗೆ ಆ ಎಲ್ಲಾ ಲಕ್ಷಣಗಳಿವೆ.

  ಪ್ರತಿಕ್ರಿಯೆ
 5. manasu

  ತುಂಬಾ ಚೆನ್ನಾಗಿದೆ ಲೇಖನ, ಮಾತಿಗೂ ಮನಸ್ಸಿಗೂ ವಿಶ್ರಾಂತಿ ಬೇಕೆ ಬೇಕು… ಮೌನಕ್ಕೆ ಶರಣಾದಗ ಮನಸ್ಸು ಹಗುರಾಗುತ್ತದೆ.

  ಪ್ರತಿಕ್ರಿಯೆ
 6. Kala Anand

  ಈ ಮನಸ್ಸು ಹೀಗೆ ಒಂಥರಾ ತಿಕ್ಕಲು,ಧಿಡೀರ್ ಅಂತ ಕೋಪ ಹೊರಹಾಕಿಬಿಡತ್ತೆ…ಇನ್ನೊಮ್ಮೆ ನಗುವನ್ನು,ಮತ್ತೊಮ್ಮೆ ಕಾರಣ ರಹಿತ ಮೌನ.ಕೆಲವೊಮ್ಮೆ ಆಲೋಚನೆಗಳು ಎಷ್ಟು ಸ್ತಭ್ಧವಾಗಿಬಿಡುತ್ತದೆ ಅಂದ್ರೆ ಕಾರಣಗಳೇ ಇಲ್ಲದೆ ಡಲ್ ಆಗಿಬಿಡುತ್ತೇವೆ,ಒಬ್ಬೊಂಟಿ ಅನಿಸುತ್ತೇವೆ,ಕೂತು ಅತ್ತುಬಿಡೋಣ ಅನ್ನಿಸುತ್ತದೆ,…ನಾನು ಹೀಗೆ ಹಲವಾರು ಬಾರಿ ಕಾರಣ ಇಲ್ದೆ ಡಲ್ ಆಗ್ಬಿಡ್ತೀನಿ…ನನಗೆ ತಿಳಿಯದೆ..ಕಣ್ಣಂಚಿನ ಕೊನೆಯಲ್ಲಿ ಕಣ್ಣೀರು ಜಾರ್ತಿರುತ್ತೆ..ಹೀಗೆ..ಕೆಲವು ಸಲ…ಯಾವುದೊ ನೆನಪು ಮನಸಿಗೆ ಸಂತೋಷನು ತರುತ್ತೆ..ಒಮ್ಮೊಮ್ಮೆ ಯಾರು ಬೇಡ ಒಂಟಿಯಾಗಿರಬೇಕು ಅನ್ಸುತ್ತೆ….ಹೀಗೆ ಮನಸಿನೊಳಗೆ ಗೊಂದಲಗಳ ಹೋರಾಟ ನಿರಂತರವಾಗಿ ನಡಿತಾನೆ ಇರುತ್ತೆ ಕಣೋ ಸುನಿಲ್..ಆದ್ರೆ…ನೀ ಹೇಳಿದ ಹಾಗೇ..ಎಲ್ಲಿಯಾದರೂ..ಒಂಟಿಯಾಗಿ ಒಬ್ಬಳೇ ಹೋಗಿರಬೇಕು ಅಂತ ಸುಮಾರು ಸಲ ಅನ್ಸಿದೆ..ಆದ್ರೆ..ಹೋಗೋ ಧೈರ್ಯನೇ ಇಲ್ಲ ಏನ್ ಮಾಡ್ಲಿ..ಹೇಳು.ಆದ್ರೆ..ನೀನು ಧೈರ್ಯವಂತ ಅಲ್ವ..ನೀನು ಹೋಗಿ ಬರಬಹ್ದು…ಹೋಗಿಬಿಟ್ ಬಾ…ಬರ್ತಾ ನಿನ್ ಮನಸಿನ ಗೊಂದಲಗಳನ್ನೆಲ್ಲಾ ಗಂಟು ಮೂಟೆ ಕಟ್ಟಿ ಅಲ್ಲೇ ಬಿಟ್ಟು ಬಾ…ಯಾಕಂದ್ರೆ..ನೀ ವಾಪಾಸ್ ಬರೋಷ್ಟರಲ್ಲಿ..ಮತ್ತಷ್ಟು ಗೊಂದಲಗಳು…ಕಾಯುತ್ತಾಯಿರ್ತವೆ..ನಿನಗೋಸ್ಕರ…ಅದೇನೇ ಆಗ್ಲಿ..ನಿನ್ ಬೇರೆ ಅರ್ತಿಕ್ಲೆಸ್ ಗೆ compare .ಮಾಡಿದರೆ..ಇಡು ತುಂಬಾ ಗಂಭೀರವಾಗಿದೆ..ತುಂಟ ಸುನಿಲ್ ನ ಮನಸಿನ್ನಲ್ಲು..ಒಬ್ಬ ಪ್ರಬುದ್ಧ ವ್ಯಕ್ತಿ ಇದಾನೆ ಅನ್ಸುತ್ತೆ…..

  ಪ್ರತಿಕ್ರಿಯೆ
 7. uma prakash

  ‘ಮನಸ್ಸಿನ ಸಮಸ್ಯೆಗಳು’ ! ನನ್ನಲ್ಲಿ ಕೂಡ ಸಾಕಷ್ಟು ಗೋಜಲು ಗೋಜಲಾಗಿದೆ, ತಿಳಿಯಾದ ಮನಸ್ಸು ತಿಳಿ ನೀರಿಗೆ ಹೋಲಿಸಿದರೆ; ದ್ವಂದ್ವ ಮನಸ್ಸು ಕಲುಷಿತ ನೀರಿಗೆ ಹೋಲಿಕೆ ; ಮನಸ್ಸಿಗೆ ಹತ್ತು ಹಲವಾರು ಮುಖಗಳು ಎಲ್ಲದರ ಚಿತ್ರಣ ಸೊಗಸಾಗಿದೆ ಅಂತ ನನ್ನ ‘ಮನಸ್ಸು’ ಹೇಳ್ತಾ ಇದೆ

  ಪ್ರತಿಕ್ರಿಯೆ
 8. Anuradha.rao

  ನಾವು ಇರುವ ಪರಿಸರದಲ್ಲೇ ಮನಸ್ಸು ತಿಳಿಯಾಗಿಸುವ ಪ್ರಯತ್ನ ಒಳ್ಳೆಯದು ಅಂತ ನನ್ನ ಅನ್ನಿಸಿಕೆ ,ನೀವು ಹೇಳಿದಂತೆ ವರ್ಷಕ್ಕೆ ಎರಡು ಬಾರಿ ನಮ್ಮೂರು ಮಲೆನಾಡಿಗೆ ಹೋಗಿ ಬೇರೆಯೇ ಆದ ಒಂದು ಹೊಸ ಪ್ರಪಂಚದಲ್ಲಿ ಅಡ್ಡಾಡಿ ಬಂದ ಮೇಲೆ ಸ್ವಲ್ಪ ಹಗುರವಾಗುವುದಂತೂ ಹೌದು ,,ಬ್ಯಾಟರಿ ರೀ ಚಾರ್ಜ್ ಮಾಡಿದಂತೆ ..ನಿಮಗೂ ಇದನ್ನು ಬರೆದು ಹಕ್ಕಿಯಂತೆ ಹಾರಿದ ಅನುಭವ ಆಗಿರಬಹುದು .

  ಪ್ರತಿಕ್ರಿಯೆ
 9. Veena Bhat

  ಪ್ರಯಾಣದ ಮಧ್ಯೆ ಕೊಟ್ಟ ಪ್ರತಿಯೊಂದು ನೋವು ಹಾಗು ಸಂತೋಷವೇ ಅನುಭವ….ಅದು ನಮ್ಮನ್ನು ಗಟ್ಟಿ ಮಾಡಿದಷ್ಟು ಬೇರೆ ಯಾವುದು ಮಾಡಲು ಸಾಧ್ಯವಿಲ್ಲ……Very true…
  Nice article….inspiring…..

  ಪ್ರತಿಕ್ರಿಯೆ
  • D.RAVI VARMA

   eke madam neevu silent aagideeri, bareyodakku raja togandidiraa yaake nimmannu nimma aa muddada gelati jarman shaphard naayiyannu avadhiyalli nodi bahala kalavaaytalla
   ravi varma hosapete

   ಪ್ರತಿಕ್ರಿಯೆ
 10. D.RAVI VARMA

  ನಮ್ಮ ಹಿಂದಿನ ತಲೆಮಾರಿನವರು ಇದನ್ನು ಸಂಪೂರ್ಣವಾಗಿ ಚೆನ್ನಾಗಿ ಅರ್ಥಿಸಿಕೊಂಡಿದ್ದರು ,ಹಾಗಾಗಿಯೇ ಅವರು ವರ್ಷ್ಕೊಮ್ಮೆಯೋ.ಎರಡು ಬಾರಿಯೋ ತಿರುಪತಿ,ರಾಮೇಶ್ವರ, dharmastala ಕನ್ಯಾಕುಮಾರಿ ಹೀಗೆ ನೆಪ ಮಾಡಿಕೊಂಡು ಹೊರ ಹೋಗಿ ಬರುತ್ತಿದ್ದರು ಅದು ಪ್ರಯಾನವಸ್ತೆ ಅಲ್ಲ ಅಲ್ಲಿರೋ ಪರಿಸರಕ್ಕೆ ಹೊಂದಿಕೊಳ್ಳುವ, ಗುಂಪು ಗುಂಪಾಗಿ ಹೋದಾಗ ಆಗುವ ಅನನುಕುಲ, ಮತ್ತ್ತು ಅದರ ಜೊತೆ ಅದು ತಂದುಕೊಡುವ ವಿಸಿಸ್ತ ಆನಂದ ಎಲ್ಲವು ಆದರೆ ನಾವು ಈವತ್ತು ದುಡ್ಡು ಸಮಯ ಒತ್ತಡ ದ ಹಿಂದೆ ಬಿದ್ದು ಎಲ್ಲವನ್ನು ಕಳಕೊಂಡುಅಂತರ್ಪಿಶಚಿಗಲಾಗಿದ್ದೇವೆ , ದೇಶ ಸುತ್ತು ಕೋಶ ಓದು ಎನ್ನುವ ಹಳೆಯ ಗಾದೆಯನ್ನು ಮರೆತಿದ್ದೇವೆ. ಈ ನಿಟ್ಟಿನಲ್ಲಿ ಪಶ್ಚಿಮತ್ಯ್ರ ಬದುಕು ಅನುಕರಣೀಯವೇನೋ ನಿಮ್ಮ ಸರಳ ಲೇಖನ ನನಗೆ ತುಂಬಾ ಹಿಡಿಸಿತು
  RAVI VARMA HOSAPETE

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: